ಬೆಂಗಳೂರು-ಇಂದು ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ ಐದು ಗ್ಯಾರಂಟಿ ಹಿನ್ನೆಲೆಯಲ್ಲಿ ಜನರು ಆಶೀರ್ವಾದ ಮಾಡಿದ್ರು.ಶಾಸಕರು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ದೃಷ್ಟಿ ಕೋನದಲ್ಲಿ ಕಾಂಗ್ರೆಸ್ ಮುಖಂಡರು ಬ್ಲಾಕ್ ಮೇಲ್ ಮಾಡ್ತಾ ಇದಾರೆ.ಲೋಕ ಸಭಾ ಚುನಾವಣೆಗೆ ವೋಟ್ ಮಾಡಿಲ್ಲ ಅಂದ್ರೆ ಗ್ಯಾರಂಟಿ ರದ್ದು ಮಾಡ್ತೀವಿ ಅಂತಾ ಬ್ಲಾಕ್ ಮೇಲ್ ಸಂಸ್ಕೃತಿ ಪ್ರಾರಂಭ ಮಾಡಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಖಂಡನೀಯ ಹಾಗಾಗಿ ಚುನಾವಣಾಧಿಕಾರಿ ಮನೋಜ್ ಕುಮಟ ಗೆ ದೂರು ಕೊಟ್ಟಿದಿವಿ.ಈ ವಿಚಾರ ಗಂಭೀರವಾಗಿ ಪರಿಗಣನೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನೂ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು.ಭಾರತದ ಇನ್ನೊಂದು ರಾಷ್ಟ್ರವಾಗಿ ಹೊರ ಒಮ್ಮಬೇಕು ಎಂಬ ಇನ್ ಸೆನ್ಸಿಟಿವ್ ಹೇಳಿಕೆಗೆ ಸಂಸದರಾಗಿ ಆಯ್ಕೆಯಾದವರು ಜವಾಬ್ದಾರಿಯಲ್ಲಿ ಇರುವವರು ಇಂತಹ ಬಾಲಿಶ ಹೇಳಿಕೆ ನಿಜಕ್ಕೂ ಖಂಡನೀಯ.ಭಾರತವನ್ನು ಎರೆಡು ದೇಶವನ್ನಾಗಿ ಮಾಡಬೇಕು ಎಂಬ ಹೇಳಿಕೆಗೆ ಉತ್ತರ ಕೊಡೋಕೆ ಅರ್ಥ ಆಗ್ತಿಲ್ಲ.ಜನಪ್ರತಿನಿಧಿಗಳು ಈ ರೀತಿ ಹೇಳಿಕೆ ಕೊಡಬಾರದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದರು.