ರಸ್ತೆ ಗುಂಡಿ ಮುಚ್ಚಲಾಗದೇ ರಾಜ್ಯ ರಾಜಧಾನಿ ಬೆಂಗಳೂರಿನ ಅಂದ ಹಾಳುಮಾಡಿದ್ದ ಪಾಲಿಕೆಗೆ ಇದೀಗ ಹೈಕೋರ್ಟ್ ಬಿಸಿಮುಟ್ಟಿಸಿದೆ. ಕಾದ ಸಮಯದಲ್ಲೇ ಕಬ್ಬಿಣ ಬಡಿಯಬೇಕು ಎನ್ನುವಂತೆ ಹೈಕೋರ್ಟ್ ಬೀಸಿದ ಚಾಟಿಗೆ ಪಾಲಿಕೆ ಕಂಗಾಲಾಗಿಬಿಟ್ಟಿದೆ. ಹೌದು, ಈ ಹಿಂದೆ ಹಲವು ಬಾರಿ ರಸ್ತೆಗುಂಡಿ ಮುಚ್ಚುವ ವಿಚಾರಕ್ಕೆ ನಿರ್ಲಕ್ಷ್ಯ ತೋರಿ ಛೀಮಾರಿ ಹಾಕಿಸಿಕೊಂಡಿದ್ದ ಪಾಲಿಕೆ, ಮತ್ತೆ ಮುಜುಗರಕ್ಕೆ ಒಳಗಾಗಿದೆ. ಮೊನ್ನೆಯಷ್ಟೇ ಇದೇ ವಿಚಾರಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತೆ ಪಾಲಿಕೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ, ಬೇಕಾದ್ರೆ ಮುಖ್ಯ ಆಯುಕ್ತರನ್ನೇ ಅಮಾನತು ಮಾಡ್ತೀವೆ ಅಂತಾ ಎಚ್ಚರಿಕೆ ನೀಡಿದ್ದಾರೆ. ಇದು ಇದೀಗ ಪಾಲಿಕೆ ಅಧಿಕಾರಿಗಳ ನಿದ್ದೆಗೆಡಿಸಿಬಿಟ್ಟಿದೆ.. ಇತ್ತ ಹೈಕೋರ್ಟ್ ಬಿಸಿ ಮುಟ್ಟಿಸುತ್ತಿದ್ದಂತೆ ಎಚ್ಚೆತ್ತ ತುಷಾರ್ ಗಿರಿನಾಥ್ ಕೂಡ ಎನೇನೋ ಲೆಕ್ಕಚಾರ ಹಾಕೊಂಡು ಕೋರ್ಟ್ ಮುಂದೆ ಹಾಜರಾಗೋಕೆ ಸಿದ್ಧರಾಗಿಬಿಟ್ಟಿದ್ದಾರೆ. ನಾಳೆ ಹೈಕೋರ್ಟ್ ಮುಂದೆ ಏನು ಹೇಳ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಕಾಡ್ತಾ ಇದೆ.