Select Your Language

Notifications

webdunia
webdunia
webdunia
webdunia

ಹೆಚ್ಚುತ್ತಲೇ ಸಾಗಿದ ಈರುಳ್ಳಿ ಬೆಲೆ

ಹೆಚ್ಚುತ್ತಲೇ ಸಾಗಿದ ಈರುಳ್ಳಿ ಬೆಲೆ
bangalore , ಸೋಮವಾರ, 20 ನವೆಂಬರ್ 2023 (18:00 IST)
ಮಹಾರಾಷ್ಟ್ರದ ನಾಸಿಕ, ಸೊಲ್ಲಾಪುರದಿಂದ ರಾಜ್ಯಕ್ಕೆ ಈರುಳ್ಳಿ ಪೂರೈಕೆಯಾಗದೆ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಳದಿಂದ ಈರುಳ್ಳಿ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಕಳೆದ ಎರಡು ವರ್ಷಗಳಿಂದ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗದ ಕಾರಣ ಈ ವರ್ಷ ಅನೇಕ ಸಾಮಾನ್ಯ ಈರುಳ್ಳಿ ಬೆಳೆಗಾರರು ಇತರೆ ಬೆಳೆ ಬೆಳೆಯಲು ಪ್ರಾರಂಭಿಸಿದ್ದರು.

ಇದಲ್ಲದೆ ಮಳೆ ಕೊರತೆಯಿಂದಾಗಿ ಬೆಳೆಯೂ ಸರಿಯಾಗಿ ರೈತರ ಕೈ ಸೇರಿಲ್ಲ. ಇದೀಗ ದಿಢೀರ್‌ ಬೆಲೆ ಏರಿಕೆಯಿಂದ ಎಲ್ಲರೂ ಚಡಪಡಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯಾದರೆ ಕ್ವಿಂಟಾಲ್‌ಗೆ 8000 ರಿಂದ 9000 ರೂ.ಗೆ ಏರುವ ಸಾಧ್ಯತೆಯಿದೆ. ಇದರಿಂದಾಗಿ ಚಿಲ್ಲರೆ ವ್ಯಾಪಾರಿಗಳು ಕೆಜಿಗೆ 100 ರಿಂದ 120 ರೂ. ವರೆಗೆ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಸಗಟು ವ್ಯಾಪಾರಿಗಳು ಅಭಿಪ್ರಾಯಪಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಬಾಲಕನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ