ಚಿಕ್ಕಬಳ್ಳಾಪುರ ಕ್ಷೇತ್ರದ ಮತಗಟ್ಟೆಯಲ್ಲಿ ಕಾಂಗ್ರೆಸ್ ಏಜೆಂಟ್ ಚೇತನ್ ಕುಮಾರ್ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು ಎಂಬ ಕಾರಣಕ್ಕೆ ಗ್ರಾಮಾಂತರ ಠಾಣಾ ಎಸ್ ಐ ಚೇತನ್ ಗೌಡ ಮತಗಟ್ಟೆಯಿಂದ ಹೊರದಬ್ಬಿದ್ದಾರೆ.
ಇದರಿಂದ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಬಳಿಕ ಸ್ಥಳಕ್ಕೆ ಬಂದ ಎಸ್ ಪಿ, ಎಸ್ ಐ ಚೇತನ್ ಗೌಡಗೆ ಎಚ್ಚರಿಕೆ ನೀಡಿ ಕಾಂಗ್ರೆಸ್ ಏಜೆಂಟ್ ಚೇತನ್ ಕುಮಾರ್ ಗೆ ಮತಗಟ್ಟೆಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿದ್ದಾರೆ.