Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರನ್ನ ಡ್ರಗ್ಸ್ ಮುಕ್ತ ಮಾಡಲು ಪೊಲೀಸ್ರು ಇನ್ನಿಲ್ಲದ ಕಸರತ್ತು

ಬೆಂಗಳೂರನ್ನ ಡ್ರಗ್ಸ್ ಮುಕ್ತ ಮಾಡಲು ಪೊಲೀಸ್ರು ಇನ್ನಿಲ್ಲದ ಕಸರತ್ತು
bangalore , ಮಂಗಳವಾರ, 11 ಏಪ್ರಿಲ್ 2023 (18:53 IST)
ರಾಜಧಾನಿ ಬೆಂಗಳೂರಲ್ಲಿ ಡ್ರಗ್ಸ್ ನಿರ್ನಾಮ ಮಾಡೋಕೆ ಪೊಲೀಸರು ಇನ್ನಿಲ್ಲದ ಕಸರತ್ತು ಮಾಡ್ತಾರೆ.ಆದ್ರೆ ಪೊಲೀಸರು ಡ್ರಗ್ಸ್ ಕಡಿಮೆಯಾಯ್ತು ಅಂದುಕೊಳ್ಳುವುದರಲ್ಲಿ ಭಾರಿ ಮೊತ್ತದ ಡ್ರಗ್ಸ್ ಖಾಕಿ ಕಣ್ಮುಂದೆ ಬಂದಿರುತ್ತೆ. ನಗರದ ವಿವಿಪುರ‌ಪೊಲೀಸ್ರು 8 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಮಾಡಿ  ಐವರು ವಿದೇಶಿ ಡ್ರಗ್ ಪೆಡ್ಲರ್ ಗಳು ಆರೆಸ್ಟ್ ಮಾಡಿದ್ದಾರೆ.ರಾಜಧಾನಿ ಬೆಂಗಳೂರನ್ನ ಡ್ರಗ್ಸ್ ಮುಕ್ತ ಮಾಡಲು ಪೊಲೀಸ್ರು ಇನ್ನಿಲ್ಲದ ಕಸರತ್ತು ಮಾಡ್ತಾ ಇರ್ತಾರೆ. ಆದ್ರೆ ಪೆಡ್ಲರ್ ಗಳು ಮಾತ್ರ ನಾವು ಡ್ರಗ್ಸ್ ಮಾರಾಟ ಮಾಡೋದನ್ನ ನಿಲ್ಲಿಸೋದೆ ಇಲ್ಲ ಎಂಬಂತೆ ಭಾರೀ ಡ್ರಗ್ಸ್ ನೊಂದಿಗೆ ಪೊಲೀಸ್ರಿಗೆ ಸಿಕ್ಕಿ ಬೀಳ್ತಾರೆ. ಈಗ ಪೊಲೀಸ್ರಿಂದ ಅಂತಹದೇ ಕಾರ್ಯಾಚರಣೆಯಾಗಿದ್ಸು ಬರೋಬ್ಬರಿ ಎಂಟು ಕೋಟಿ, ಇಪ್ಪತ್ತು ಲಕ್ಷ ಮೌಲ್ಯದ ಡ್ರಗ್ಸ್ ನ್ನ ಬೆಂಗಳೂರು ದಕ್ಷಿಣ ವಿಭಾಗದ ವಿವಿಪುರಂ ಹಾಗೂ ಜಯನಗರ ಠಾಣೆ ಪೊಲೀಸ್ರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಐವರು ವಿದೇಶಿ ಡ್ರಗ್ ಪೆಡ್ಲರ್ ಗಳನ್ನ ಬಂಧನ ಮಾಡಿದ್ದಾರೆ.‌ ಲಾರೆನ್ಸ್, ಚುಕ್ವೂನೇಮ್, ಹಸ್ಲೆ, ಫ್ರಾಂಕ್ ಜಾಗೂ ಇಮ್ಯಾನ್ಯುಲ್ ನಾಝಿ ಬಂಧಿತ ಆರೋಪಿಗಳು.

ವಿವಿಪುರ ಪೊಲೀಸರಿಗೆ ಖಚಿತ ಮಾಹಿತಿಯೊಂದು ಸಿಕ್ಕಿತ್ತು ಮೆಟ್ರೋ‌ ಸ್ಟೇಷನ್ ಒಂದರ ಬಳಿ ಇಬ್ಬರು ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ಸಾರೆ ಎಂದು. ಇದರ ಬೆನ್ನು ಬಿದ್ದ ಪೊಲೀಸ್ರು ಇಬ್ಬರು ಆರೋಪಿಗಳ ಬಂಧನ ಮಾಡಿ ಸ್ವಲ್ಪ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡು ವಿಚಾರಣೆ ಮಾಡಿದಾಗ ಆರೋಪಿಗಳ ಬಳಿಯಿದ್ದ ವೈಟ್ ಎಂ ಡಿ ಎಂ ಎ, ಬ್ರೌನ್ ಎಂಡಿಎಂಎ ಹಾಗೂ 300 ಗ್ರಾಂ ಕೊಕೈನ್ ಪತ್ತೆಯಾಗಿದೆ. ಸಿಂಥೆಟಿಕ್ ಡ್ರಗ್ಸ್ ಮಾದರಿಯ ದುಬಾರಿ ಡ್ರಗ್ಸ್ ಗಳಲ್ಲಿ ಇವುಗಳು ಪ್ರಮುಖವಾಗಿದ್ದು ಇದರ ಬೆಲೆ ಬರೋಬ್ಬರಿ ಏಳು ಕೋಟಿ. ಇನ್ನೂ ಇದೇ ರೀತಿ ಜಯನಗರ ಠಾಣೆ ಪೊಲೀಸ್ರು ಖಚಿತ ಮಾಹಿತಿ ಅಧರಿಸಿ ಮೂವರು ಆರೋಪಿಗಳನ್ನ ಬಂಧನ ಮಾಡಿದ್ದು ಆರೋಪಿಗಳಿಂದ ಬರೋಬ್ಬರಿ 1ಕೋಟಿ 20 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಸದ್ಯ ಆರೋಪಿಗಳಿಂದ ಡ್ರಗ್ಸ್ ವಶಪಡಿಸಿಕೊಂಡಿರುವ ಪೊಲೀಸರಿಗೆ ಇಷ್ಟೊಂದು ಭಾರಿ ಪ್ರಮಾಣದ ಡ್ರಗ್ಸ್ ಯಾರಿಗೆ ಸಫ್ಲೈ ಆಗ್ತಾ ಇತ್ತು ಅನ್ನೋ ಅನುಮಾನ ಶುರುವಾಗಿದೆ.  ಈ ದುಬಾರಿ ಡ್ರಗ್ಸ್ ಗಳನ್ನ ಹೈಪ್ರೊಫೈಲ್ ಜನರು ಬಳಸುತ್ತಿದ್ದು ಯಾರೆಲ್ಲ ಈ ಜಾಲದಲ್ಲಿ ಸಿಕ್ಕಿ ಬೀಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾರ್ ನಲ್ಲಿ ಬಾಟಲಿಯಿಂದ ಹೊಡೆದು ಒಬ್ಬನ ಕೊಲೆ..!