ಮತ್ತೆ ಮೂರು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ಜಿಲ್ಲೆಯಲ್ಲಿ ವೈರಸ್ ಪೀಡಿತರ ಸಂಖ್ಯೆ 10ಕ್ಕೆ ಏರಿಕೆಯಾದಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮೂರು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯು ಸ್ಪಷ್ಟಪಡಿಸಿದೆ. 50 ವರ್ಷದ ವ್ಯಕ್ತಿ (ಪಿ-182), 40 ವರ್ಷದ ಮಹಿಳೆ(ಪಿ-192) ಹಾಗೂ 22 ವರ್ಷದ ಯುವಕ(ಪಿ-193)ನಲ್ಲಿ ಸೋಂಕು ಪತ್ತೆಯಾಗಿದೆ.
ಈ ಮೂವರೂ ಈಗಾಗಲೇ ಸೋಂಕಿತರಾಗಿರುವ 20 ವರ್ಷದ ಪಿ-128 ಇವರ ಕುಟುಂಬದ ಸದಸ್ಯರಾಗಿದ್ದಾರೆ.
ಸೋಂಕಿತ ಯುವಕ ಪಿ-128 ಇವರ ತಂದೆ, ತಾಯಿ ಮತ್ತು ಸಹೋದರನಿಗೆ ಕೂಡ ಸೋಂಕು ದೃಢಪಟ್ಟಿರುವುದು ಆರೋಗ್ಯ ಇಲಾಖೆ ತಿಳಿಸಿದೆ.