ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನಲೆಯಲ್ಲಿ ಒಂದೇ ಹಂತದಲ್ಲಿ 224 ಅಭ್ಯರ್ಥಿಗಳ ಹೆಸರು ಪ್ರಕಟ ಮಾಡುವುದಾಗಿ ಬೆಂಗಳೂರಿನಲ್ಲಿ ಬುಧವಾರ (ಇಂದು) ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.
‘ಟಿಕೆಟ್ ಅಂತಿಮ ಸಂಬಂಧ ಇವತ್ತು ಇಡೀ ದಿನ ಸಭೆ ಮಾಡುತ್ತಿದ್ದೇವೆ. ಏ.9-10 ಸ್ಕ್ರೀನಿಂಗ್ ಕಮಿಟಿ ಸಭೆ , ಏ.15ರೊಳಗೆ ಅಭ್ಯರ್ಥಿಗಳ ಹೆಸರು ಪ್ರಕಟ ಮಾಡುವುದಾಗಿ’ ಅವರು ತಿಳಿಸಿದ್ದಾರೆ. ‘ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧ್ಯಕ್ಷರ ಜೊತೆ ಸಭೆ ಮಾಡುತ್ತೇವೆ. ಚುನಾವಣಾ ಪ್ರಚಾರದಲ್ಲಿ 40 ಸ್ಟಾರ್ ಕ್ಯಾಂಪೇನರ್ ಭಾಗಿಯಾಗಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ