ತಾಯಿಯೊಬ್ಬಳು ತನ್ನ ಮಗುವಿಗೆ ನೀಡಿದ ಎದೆಹಾಲಿನಿಂದಾಗಿಯೇ ಮಗು ಮೃತಪಟ್ಟ ಮನಕಲುಕುವ ಘಟನೆ ನಡೆದಿದೆ.
ವಿಜಯಪುರ ಮೂಲದ ದಂಪತಿಯ 10 ತಿಂಗಳ ಮಗು ಉಡುಪಿಯಲ್ಲಿ ಮೃತಪಟ್ಟಿದೆ.
ಮಲಗಿದ್ದಲ್ಲಿಯೇ ಎದೆ ಹಾಲು ನೀಡಿದ್ದರಿಂದಾಗಿ ಮಗುವಿನ ಶ್ವಾಸಕೋಶದಲ್ಲಿ ಹಾಲು ಸಿಲುಕಿ ಸಾವಿಗೆ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮಕ್ಕಳಿಗೆ ಯಾವುದೇ ಕಾರಣಕ್ಕೂ ಮಲಗಿಕೊಂಡು ಹಾಲು ಉಣಿಸಬಾರದು ಎಂದು ವೈದ್ಯರು ತಿಳಿಸಿದ್ದಾರೆ.