ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಪರಿಹಾರವಲ್ಲ. ಈ ಮೊದಲು ನಾವು ಲಾಕ್ ಡೌನ್ ಮಾಡಿದ್ದೇವೆ.
ಹೀಗಂತ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಚಿಕ್ಕಮಗಳೂರು ನಗರದ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕಾಮಗಾರಿ ಪರಿಶೀಲನೆ ಮಾಡಿ ಮಾತನಾಡಿ, ಈ ಕೊರೊನಾ ಚೀನಾ ವೈರಸ್ . 3, 6 ತಿಂಗಳಿಗೆ ಹೋಗುವಂತದಲ್ಲ. ಎಲ್ಲಾ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಇನ್ನು 6 ತಿಂಗಳು ಕೊರೋನಾ ಹತೋಟಿಗೆ ತರಲು ಹಗಲು ರಾತ್ರಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಬೇಕು.
ಹೊರ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಸೋಂಕು ಕಡಿಮೆ ಇದೆ. ಸರ್ಕಾರ ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದೆ ಎಂದರು.