Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಿವಿಂಗ್ ನಲ್ಲಿದ್ದ ಲವ್ ಬರ್ಡ್ಸ್ ಮಧ್ಯೆ ಕಿರಿಕ್

ಲಿವಿಂಗ್ ನಲ್ಲಿದ್ದ ಲವ್ ಬರ್ಡ್ಸ್  ಮಧ್ಯೆ ಕಿರಿಕ್
bangalore , ಭಾನುವಾರ, 27 ಆಗಸ್ಟ್ 2023 (17:23 IST)
ಮದುವೆಗೆ ಮೊದಲು  ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋಕ್ಕೆ ಅಂತ ಲೀವಿಂಗ್ ಟುಗೇದರ್ ಅನ್ನೋ ಸಾಮಾಜಿಕ ಭದ್ರತೆಯಲ್ಲಿ ಬದುಕಿತ್ತಿದ್ದಾರೆ. ಈ ರಿಲೆಷನ್ ಷಿಪ್ ಅನ್ನೋ  ಮದುವೇಯೇತರ ಸಭಂದಕ್ಕೆ ಮಾತ್ರ ಮೈಲೆಜ್ ತುಂಬಾ ಕಡಿಮೆ ಇದಕ್ಕೆ ಸಾಕಾಷ್ಟು ಕೇಸ್ ಗಳನ್ನ ನೋಡಿದ್ದೇವೆ.ಅದಕ್ಕೆ ಇದು ಒಂದು ಹೊಸ ಸೇರ್ಪಡೆ ಅಷ್ಟೇ .ಅನುಮಾನದ ಪಿಶಾಚಿ ತಲೆಯಲ್ಲಿ ಹೊಕ್ಕಮೇಲೆ ನೆಮ್ಮದಿಯ ಬದುಕೆಲ್ಲಿ.ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿಯ ಮಧ್ಯೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯಯಾಗಿರೋ ಘಟನೆ ಬೆಂಗಳೂರಿನ ಬೇಗರೂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ತನ್ನ ಪ್ರಿಯಯತಮೆಯನ್ನೇ ಪ್ರೇಮಿಯೊಬ್ಬ ಕುಕ್ಕರ್ ನಿಂದ ಕೊಂದು ಕೊಲೆ ಮಾಡಿದ್ದಾನೆ.. ದೇವಾ ಎಂಬ 24ವರ್ಷದ ಯುವತಿಯನ್ನ ಅದೇ ವಯಸ್ಸಿನ ಪ್ರಿಯತಮ ವೈಷ್ಣವ್ ಕೊಲೆ ಮಾಡಿ ಪೊಲೀಸರಿಂದ ಅರೆಸ್ಟ್ ಆಗಿದ್ದಾನೆ.

ಎಂಜಿನಿಯರಿಂಗ್ ಓದಿ ಪದವಿ ಪಡೆದಿದ್ದ ದೇವಾ ಮತ್ತು ವೈಷ್ಣವ್ ಇಬ್ರೂ ಕೇರಳ ಮೂಲದವ್ರು.. ದೇವಾ  ಕೊಚ್ಚಿಯಾಕೆ ಆದ್ರೆ ವೈಷ್ಣವ್ ತಿರುವಂತನಪುರಂನಾಥ.. ಇಬ್ಬರಿಗೂ ಓದೋವಾಗ್ಲೆ ಲವ್ ಅಲ್ಲಿ ಬಿದ್ದಿದ್ರು.. ಈ ವಿಚಾರ ಇಬ್ಬರ ಮನೆಯವ್ರಿಗೂ ಗೊತ್ತಾಗಿ ಪ್ರೀತಿಗೆ ಒಪ್ಪಿಗೆ ಕೂಡ ಸೂಚಿಸಿದ್ರು.. ಓದಿನ ನಂತರ ಬೆಂಗಳೂರಿಗೆ ಬಂದಿದ್ದೋರು ಕೋರಮಂಗಲದ ಖಾಸಗಿ ಕಂಪನಿಯಲ್ಲಿ ಇಬ್ಬರೂ ಕೆಲಸ ಮಾಡ್ತಿದ್ರು.. ಬೇಗೂರು ಠಾಣಾ ವ್ಯಾಪ್ತಿಯ ನ್ಯೂ ಮೈಕೋ ಲೇಔಟ್ ನಲ್ಲಿ ಮನೆ ಮಾಡಿಕೊಂಡಿದ್ದವರು ಇಬ್ಬರೂ ಜೊತೆಯಲ್ಲೇ ಲಿವಿಂಗ್ ಟುಗೆದರ್ ನಲ್ಲಿದ್ರು.. ಜೀವನ ಚೆನ್ನಾಗೇ ಸಾಗ್ತಿತ್ತು.. ಮುಂದಿನ ದಿನಗಳಲ್ಲಿ ಮದ್ಚೆ ಮಾಡ್ಕೊಳ್ಳೋಕು ಚಿಂತನೆ ಮಾಡಿದ್ರು.. ಆದ್ರೆ ಅಷ್ಟರಲ್ಲೇ ಜಗಳ ಶುರುವಾಗಿತ್ತು.. ಇತ್ತೀಚೆಗೆ ದೇವಾ ಮೇಲೆ ಅನುಮಾನ ಪಡ್ತಿದ್ದ ವೈಷ್ಣವ್ ಆಗಾಗ ಜಗಳ ತೆಗೀತ್ತಿದ್ದ.. ಹಂಗೆ ನಿನ್ನೆ ಸಂಜೆ ನಾಲ್ಕೂವರೆ ಸುಮಾರಿಗೆ ಇಬ್ಬರ ಮಧ್ಯೆಯೂ ಜಗಳ ನಡೆದಿತ್ತು.. ಆ ಜಗಳ ವಿಕೋಪಕ್ಕೆ ಹೋಗಿ ಕಿಚನ್ ನಲ್ಲಿದ್ದ ಕುಕ್ಕರನ್ನ ಕೈಗೆತ್ತುಕೊಂಡಿದ್ದ ವೈಷ್ಣವ್ ದೇವಾ ತಲೆಗೆ ಬಲವಾಗಿ ಹೊಡೆದಿದ್ದಾನೆ.. ಪರಿಣಾಮ ತೀವ್ರಗಾಯಗೊಂಡಿದ್ದ ದೇವಾ ಸಾವನ್ನಪ್ಪಿದ್ದಾಳೆ.

 ಕೊಲೆ ಬಗ್ಗೆ ಮಾಹಿತಿ ಬಂದಿದ್ದೇ ತಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬೇಗೂರು ಪೊಲೀಸರು ಆರೋಪಿ ವೈಷ್ಣವ್ ನನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.. ಏನೆ ಆಗ್ಲಿ.. ಒಂದು ಸಂಬಂಧ ಅಂದ್ಮೇಲೆ ಸಂಶಯ, ಜಗಳ ಬಂದೇ ಬರುತ್ವೆ.. ಆದ್ರೆ ತಾಳ್ಮೆಯಿಂದ ಜಗಳ ಕಂಟ್ರೋಲ್ ಮಾಡಿದ್ರೆ ಇಂತಹ ಯಾವ ಅನಾಹುತವೂ ಆಗಲ್ಲ.. ಕೋಪ ವಿಕೋಪದಿಂದ ಈ ರೀತಿ ಬದುಕಬೇಕಾಗಿದ್ದವ ಜೀವ-ಜೀವನ ಎರಡೂ ಹಾಳಾಗೋದು ದುರಂತವೇ ಸರಿ.

Share this Story:

Follow Webdunia kannada

ಮುಂದಿನ ಸುದ್ದಿ

ನೇರಳ ಮಾರ್ಗದ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ