ಕಿಡ್ನಾಪ್ ಆಗಿದ್ದ ಎರಡು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆಯಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಸಿದ್ದಾಪುರದ ಯಡಮೊಗೆ ಗ್ರಾಮದ ಕುಮ್ಚಿಬೇರು ಎಂಬಲ್ಲಿ ಮನೆಯಲ್ಲಿ ಮಲಗಿದ್ದ ಸ್ಥಳದಿಂದಲೇ ಎರಡು ವರ್ಷದ ಹೆಣ್ಣು ಮಗುವನ್ನು ಮುಸುಕುಧಾರಿಯೊಬ್ಬ ಅಪಹರಣ ಮಾಡಿದ್ದ.
ತಾಯಿ ರೇಖಾ ಹಾಗೂ ಇಬ್ಬರು ಮಕ್ಕಳು ಮಲಗಿದ್ದಾಗ ಅಪರಿಚಿತನೊಬ್ಬ ಕಿರಿಯ ಹೆಣ್ಣು ಮಗು ಸಾನ್ವಿಕಾಳನ್ನು ಅಪಹರಣ ಮಾಡಿದ್ದ ಕುರಿತು ದೂರು ದಾಖಲಾಗಿತ್ತು. ಮಗು ಈಗ ನದಿಯಲ್ಲಿ ಶವವಾಗಿ ಪತ್ತೆಯಾಗಿದೆ.
ಅಪಹರಣಕಾರ ಮಗುವನ್ನು ಎತ್ತಿಕೊಂಡು ನದಿಯಲ್ಲಿ ಹೋಗಿದ್ದ ನಾನೂ ಬೆನ್ನತ್ತಿದ್ದರೂ ಕತ್ತಲಾದ್ದರಿಂದ ಹಿಡಿಯಲಾಗಲಿಲ್ಲ ಎಂದು ಮಗುವಿನ ತಾಯಿ ಹೇಳಿದ್ದರು. ಪೊಲೀಸರು ತನಿಖೆ ಕೈಗೊಂಡಿದ್ದಾರೆ.