ಬೆಂಗಳೂರು : ಲಾಕ್ ಡೌನ್ ಸಡಿಲಿಕೆಯಾದರೂ ಹೋಟೆಲ್ ಸರ್ವಿಸ್ ಗೆ ಅನುಮತಿ ನೀಡದ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಕರ್ನಾಟಕ ಹೋಟೆಲ್ ಮಾಲೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 50ಸಾವಿರಕ್ಕೂ ಹೆಚ್ಚು ಹೊಟೆಲ್ ಗಳು ಇವೆ. ಆದರೆ ಹೋಟೆಲ್ ಗಳಲ್ಲಿ ಸರ್ವಿಸ್ ಗೆ ಅನುಮತಿ ನೀಡಿಲ್ಲ. ಹೋಟೆಲ್ ತೆರೆಯುವ ಬಗ್ಗೆ ಮುನ್ಸೂಚನೆಯೂ ಇಲ್ಲ. ರಾಜ್ಯದಲ್ಲಿ ಹೋಟೆಲ್ ಗಳಿಗೆ ಮಾರ್ಗಸೂಚಿ ಹೊರಡಿಸಿಲ್ಲ.
ಆದಕಾರಣ ಹೋಟೆಲ್ ನಲ್ಲಿ ಸರ್ವಿಸ್ ಗೆ ಅನುಮತಿ ನೀಡುವಂತೆ ಸಿಎಂ ಬಿಎಸ್ ಯಡಿಯೂಪ್ಪಗೆ ಮನವಿ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಮಾಲೀಕರ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ.