Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೆಗ್ಗಾನ್ ಆಸ್ಪತ್ರೆಯ ಘಟನೆ ಅಮಾನವೀಯ: ಯಡಿಯೂರಪ್ಪ

ಮೆಗ್ಗಾನ್ ಆಸ್ಪತ್ರೆಯ ಘಟನೆ ಅಮಾನವೀಯ: ಯಡಿಯೂರಪ್ಪ
ಬೀದರ್ , ಶುಕ್ರವಾರ, 2 ಜೂನ್ 2017 (13:40 IST)
ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿರುವುದು ಅಮಾನವೀಯ ಘಟನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಘಟನೆಯ ಬಗ್ಗೆ ನನಗೆ ಮಾಹಿತಿ ಲಭಿಸಿದ್ದು, ಇಂತಹ ಘಟನೆ ಮತ್ತೊಮ್ಮೆ ನಡೆಯದಂತೆ ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಿದ್ದೇನೆ. ಮಗನಿಗೆ ಆಸ್ಪತ್ರೆಗೆ ತೆರಳಿ ಪರಿಸ್ಥಿತಿಯನ್ನು ವೀಕ್ಷಿಸುವಂತೆ ತಿಳಿಸಿದ್ದೇನೆ ಎಂದರು. 
 
ಈಗಾಗಲೇ ಆಸ್ಪತ್ರೆಯ ಡೀನ್‌ ಸುಶೀಲ್‌ಕುಮಾರ್, ಮೂವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆಸ್ಪತ್ರೆಯ ಸ್ಟಾಫ್ ನರ್ಸ್‌ಗಳಾದ ಜ್ಯೋತಿ, ಚೈತ್ರಾ ಮತ್ತು ಡಿ ಗ್ರೂಪ್ ನೌಕರಳಾದ ಸುವರ್ಣಾ ಎನ್ನುವರನ್ನು ಅಮಾನತ್ತುಗೊಳಿಸಲಾಗಿದೆ
 
ರೋಗಿ ಅಮೀರ್‌ಸಾಬ್‌‌ನನ್ನು ಎಕ್ಸರೆ ಕೊಠಡಿಗೆ ಕರೆದೊಯ್ಯಲು ಆಸ್ಪತ್ರೆಯ ಸಿಬ್ಬಂದಿ ಸ್ಟ್ರೆಚರ್ ನೀಡಿರಲಿಲ್ಲ. ಇದರಿಂದ ಅನಿವಾರ್ಯವಾಗಿ ಅಮೀರ್ ಸಾಬ್ ಪತ್ನಿ ಆತನನ್ನು ಕಾಲನ್ನು ಹಿಡಿದು ಎಕ್ಸರೆ ಕೊಠಡಿಯವರೆಗೆ ಎಳೆದುಕೊಂಡು ಹೋಗಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
 
  ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಟ್ವಿಟರ್ ನಲ್ಲಿದ್ದೀರಾ..?ಪ್ರಧಾನಿ ಮೋದಿಗೆ ವರದಿಗಾರ್ತಿಯ ಪ್ರಶ್ನೆ