ಬೆಂಗಳೂರು : ಮಧ್ಯಂತರ ರಕ್ಷಣೆ ಕೋರಿ ಡಿಕೆಶಿ ಪರ ವಕೀಲರು ಹೈಕೋರ್ಟ್ ಗೆ ಸಲ್ಲಿಸಿದ ತುರ್ತು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಡಿಕೆಶಿಗೆ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಈ ಬೆನ್ನಲ್ಲೇ ಇದೀಗ ಡಿಕೆಶಿ ಪರ ವಕೀಲರು ಇಡಿ ತಕ್ಷಣ ಬಂಧಿಸದಂತೆ ಮಧ್ಯಂತರ ತಡೆಗೆ ಕೋರಿ ಹೈಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಿದ್ದಾರೆ. ಇಂದು ಈ ತುರ್ತು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದ ಎಲ್ಲಾ ಅಂಶ ಪರಿಗಣಿಸಿ ನಿನ್ನೆ ತೀರ್ಪು ನೀಡಲಾಗಿದೆ. ಈಗ ಅದನ್ನ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.
ಈ ಹಿನ್ನಲೆಯಲ್ಲಿ, ಡಿಕೆಶಿವಕುಮಾರ್ ವಿಚಾರಣೆಗೆ ತೆರಳಿದಾಗ ಅವಶ್ಯ ಬಿದ್ದರೆ ಇಡಿ ಬಂಧಿಸುವ ಸಾಧ್ಯತೆ ಇದ್ದು, ಆದಕಾರಣ ಇದೀಗ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಇಡಿ ಬಂಧನ ಭೀತಿ ಎದುರಾಗಿದೆ ಎನ್ನಲಾಗಿದೆ.