ನಮ್ಮ ಸಿಎಲ್ ಪಿ ನಾಯಕರು ಸುರ್ಜೆವಾಲ ಪ್ರದೀಪ್ ಅವರ ಮನೆಗೆ ಹೋಗಿದ್ದಾರೆ.ನಾನು ಹೋಗಬೇಕಿತ್ತು ಆದ್ರೆ ನಾನು ಶ್ರೀಗಳ ಅಂತಿಮ ದರ್ಶನಕ್ಕೆ ಕಾಂಗ್ರೆಸ್ ಪಕ್ಷದಿಂದ ತೆರಳುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದಾರೆ.
ಶಾಸಕರ ದುರ್ವರ್ತನೆಯಿಂದ ಅನೇಕ ಸಾವುಗಳಾಗ್ತಿವೆ ಒಂದು ಎರಡಲ್ಲ.ಇದು ಕೊನೆಯಾಗಬೇಕು ನಾವು ಜನರ ಧ್ವನಿ.ಜನರ ಭಾವನೆಯನ್ನು ತಿಳಿಸಬೇಕಾಗಿದೆ.ಕಾನೂನು ಬದ್ದವಾಗಿ ಹೋರಾಟ ಮಾಡಬೇಕಾಗಿದೆ.ಕಾನೂನಿನ ಮುಂದೆ ಎಲ್ಲರೂ ಒಂದೆ, ಶಿಕ್ಷೆಗೆ ಒಳಗಾಗಬೇಕು.ಆದ್ರೆ ಈ ಸರ್ಕಾರ ಎಲ್ಲರನ್ನು ರಕ್ಷಣೆ ಮಾಡ್ತಿದೆ, ಲಂಚ,ಮಂಚ, ಸಾವು ನೋವಿಗೆ ಈ ಸರ್ಕಾರ ರಕ್ಷಣೆ ಕೊಡ್ತಿದೆ.ಇನ್ನೊಂದು 60 ದಿನ ತಡ್ಕೊಳ್ಳಿ ಎಲ್ಲದಕ್ಕೂ ಉತ್ತರ ಸಿಗುತ್ತೆ ಎಂದು ಹೇಳಿದ್ದಾರೆ.
ಇನ್ನೂ ನನ್ನ ವಿರುದ್ದ ಷಡ್ಯಂತ್ರ ಎಂಬ ಲಿಂಬಾವಳಿ ಆರೊಪ ವಿಚಾರವಾಗಿಯೂ ಡಿಕೆಶಿ ಪ್ರತಿಕ್ರಿಯಿಸಿದ್ದು,ಅವರ ಹುಡುಗ ಅವನು ನಾವೇನಾದ್ರು ಬರೆದಿದ್ವಾ, ನಾವೇನಾದ್ರು ಬರೆಸಿದ್ವಾ ಷಡ್ಯಂತ್ರ ಮಾಡ್ತಿದ್ದಾರೆ ಅಂದ್ರು ಯಾರು ಅಂತ ಹೇಳಲಿ, ಕಾಂಗ್ರೆಸ್ ನವರು ಇದ್ರೆ ಹೇಳಲಿ.ನಾವ್ಯಾರು ಇದರಲ್ಲಿ ಭಾಗಿಯಾಗಿಲ್ಲ.ಪ್ರದೀಪ್ ಖಾಗದ ಬರೆದಿದ್ದಾನೆ ಕಾನೂನಿನ ಮೂಲಕ ತನಿಖೆಯಾಗಬೇಕು, ಶಿಕ್ಷೆಗೆ ಒಳಗಾಗಬೇಕು ಎಂದು ಡಿಕೆಶಿ ಹೇಳಿದಾರೆ.