ಸಿಎಂ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ಕೊಡ್ತಿಲ್ಲ ಅಂತ ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದನ್ನು ನೋಡ್ತಿದ್ರೆ ರಾಜ್ಯ ಸರ್ಕಾರ ಅಕ್ಕಿ ಕೊಡ್ತೀವಿ ಅಂತ ಹೇಳಿ ರಾಜ್ಯದ ಜನರಿಗೆ ಮೋಸ ಮಾಡ್ತಿದೆ. ಇನ್ನೊಂದು ಕಡೆ ತಮ್ಮ ದೋಖಾ ಮುಚ್ಚಿಕೊಳ್ಳಲು, ರೈತರಿಗೆ, ಜನರಿಗೆ ಕೊಟ್ಟ ಮಾತಿಂದ ತಪ್ಪಿಸಿಕೊಳ್ಳಲು ರಾಜಕಾರಣ ಮಾಡ್ತಿದೆ. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಬಂದ ಮೇಲೆ ಎಲ್ಲರಿಗೂ 5 ಕೆಜಿ ಅಕ್ಕಿ ಕೊಡ್ತಾ ಬರ್ತಿದೆ. ಯಾವುದೇ ಖರ್ಚಿಲ್ಲದೇ ತಲಾ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನ ಕೇಂದ್ರ ಕೊಡ್ತಿದೆ. ಸಾಗಣೆ ವೆಚ್ಚ, ನಿರ್ವಹಣಾ ವೆಚ್ಚಗಳನ್ನು ಕೇಂದ್ರವೇ ಭರಿಸುತ್ತಿದೆ. ಸತ್ಯ ಹೇಳಬೇಕೆಂದ್ರೆ ರಾಜ್ಯ ಸರ್ಕಾರ 10 ಕೆಜಿ ಹೆಚ್ಚುವರಿ ಅಕ್ಕಿ ಕೊಡಬೇಕು. ರಾಜ್ಯವು ಕೇಂದ್ರದ ಅಕ್ಕಿ ಸೇರಿ 15 ಕೆಜಿ ಕೊಡಬೇಕು. ಆದ್ರೆ, ಈಗ ಕೇಂದ್ರದ ಐದು ಕೆಜಿ + ಇವರ ಐದು ಕೆಜಿ ಸೇರಿಸಿ 10 ಕೆಜಿ ಕೊಡೋದಾಗಿ ಹೇಳ್ತಿದ್ದಾರೆ. ಮಾತು ತಪ್ಪಿದ ಆಪಾದನೆಯಿಂದ ಪಾರಾಗಲು ಈ ರೀತಿ ಅಕ್ಕಿಯ ರಾಜಕೀಯ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಫುಡ್ ಸೇಫ್ಟಿ ಆಕ್ಟ್ ಪ್ರಕಾರ ಕೊಡ್ತಿದೆ ಎಂದಿದ್ದಾರೆ.