ರಾಜ್ಯದ ಸ್ಥಳೀಯ ಸಂಸ್ಥೆ ಚುನವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಹೊಂದಾಣಿಕೆ ಮುಕ್ತವಾಗಿ ಚುನಾವಣೆಗೆ ಮುಂದಾಗಿರೋದಕ್ಕೆ ಅವರು ಏನಾದ್ರೂ ಮಾಡಿಕೊಳ್ಳಲಿ. ಬಟ್ಟೆ ಬಿಚ್ಚಿ ಬೇಕಾದ್ರೆ ಕುಣಿಲಿ ನಮಗೆ ಸಂಬಂಧ ಇಲ್ಲ ಅಂತಾ ಮಾಜಿ ಸಚಿವ ಹೇಳಿದ್ದಾರೆ.
ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಏನಾದ್ರೂ ಮಾಡಿಕೊಂಡು ಬಟ್ಟೆ ಬೇಕಾದರೆ ಬಿಚ್ಚಿ ಕುಣೀಲಿ. ನಮಗೆ ಸಂಬಂಧವಿಲ್ಲ ಎಂದು ಮಾಜಿ ಸಚಿವ ಸೋಮಣ್ಣ ತುಮಕೂರಿನಲ್ಲಿ ವ್ಯಂಗ್ಯವಾಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು. ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ್ರು.
ನಮ್ಮ ಕೆಲಸ ನಾವು ಮಾಡ್ತೀವಿ ಹೊಂದಾಣಿಕೆ ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು. ಬಿಜೆಪಿ ಏಕಾಂಗಿಯಾಗಿ ಹೋರಾಟ ಮಾಡಿ ಗೆಲುವು ಸಾಧಿಸಲಿದೆ ಅಂದ್ರು. ಇನ್ನೂ ಸಿಎಂ ನಾಟಿ ವಿಚಾರ ಪ್ರಸ್ತಾಪಿಸಿ, ಹೆಚ್.ಡಿ. ಕುಮಾರಸ್ವಾಮಿ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದಾರೆ. ಇನ್ನೊಬ್ಬರ ಜೊತೆಯಲ್ಲಿ ಎರವಲು ವ್ಯವಸ್ಥೆಯಲ್ಲಿ ಇದ್ದಾರೆ. ಆದರೂ ರೈತರಿಗೆ ಆತ್ಮಸ್ಥೈರ್ಯ ತುಂಬುತ್ತಿನಿ ಅಂತಾರೆ. ಅದು ಗಿಮಿಕ್ಕೋ? ಮತ್ತೊಂದೋ? ಗೊತ್ತಿಲ್ಲ. 30 ಜಿಲ್ಲೆಗೂ ಹೋಗ್ತಿನಿ ಅಂತಾರೆ. ಕಾದು ನೋಡೋಣ ಎಲ್ಲೆಲ್ಲಿ ನಾಟಿ ಹಾಕ್ತಾರೆ ಅಂತ ಟೀಕೆ ಮಾಡಿದರು.