Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೋಟಿ ಕೋಟಿ ಲಾಭ- ಇಲ್ಲಿ ರೈತರೇ ಸಹಕಾರ ಸಂಘದ ಮಾಲೀಕರು: ಸ್ಪೇಷಲ್

ಕೋಟಿ ಕೋಟಿ ಲಾಭ- ಇಲ್ಲಿ ರೈತರೇ ಸಹಕಾರ ಸಂಘದ ಮಾಲೀಕರು: ಸ್ಪೇಷಲ್
ಮಂಡ್ಯ , ಶನಿವಾರ, 7 ಸೆಪ್ಟಂಬರ್ 2019 (16:38 IST)
ಆ ಊರಿನಲ್ಲಿ ಸಹಕಾರ ಸಂಘವಿದ್ದು ಅದರ ಮಾಲೀಕರು ರೈತರೇ ಆಗಿದ್ದಾರೆ. ಅಷ್ಟೇ ಅಲ್ಲ ರೈತರು ಮಾಡ್ತಿರೋ ಕಾರ್ಯ ಮಾದರಿಯಾಗುತ್ತಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ ರೈತ ಸಹಕಾರ ಸಂಘವಿದೆ. ಈ ರೈತ ಸಂಘದ ಮಾಲೀಕರು ಇದೇ ಗ್ರಾಮದವರಾಗಿದ್ದು, ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ಮಾಲಿಕತ್ವದ ಸದಸ್ಯರು ಇದ್ದಾರೆ.  

ದೈನಂದಿನ ಚಟುವಟಿಕೆಗಳಿಗಾಗಿ ಈ ಗ್ರಾಮದಲ್ಲಿ ಒಂದು ಸೂಪರ್ ಮಾರ್ಕೆಟ್ ತೆರೆದಿದ್ದು. ಈ ಸೂಪರ್ ಮಾರ್ಕೆಟ್ ವರ್ಷದಲ್ಲಿ 5 ಕೋಟಿಯವರೆಗೂ ವಹಿವಾಟು ನಡೆಸುತ್ತದೆ. ಇಲ್ಲಿ ದೊರಕುವ ಎಲ್ಲಾ ಉತ್ಪನ್ನಗಳ ಮೇಲೆ ಕನಿಷ್ಟ  10 ರಿಂದ 18% ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸಂಘವು ಲಾಭದಾಯಕವಾಗಿ ನಡೆಯುತ್ತಿದೆ ಹಾಗೂ ಈ ಸಹಕಾರ ಸಂಘವು ವಾರ್ಷಿಕ ಸರಾಸರಿ 30 ಕೋಟಿ ವ್ಯವಹಾರ ನಡೆಸುತ್ತದೆ.

ದೊಡ್ಡ ವ್ಯಾಪಾರಿಗಳು MRP ದರಕ್ಕೆ  ಯಾವುದೇ ರಿಯಾಯಿತಿ ನೀಡದೆ ವ್ಯಾಪಾರ ಮಾಡಿದರೂ ನಷ್ಟ ಅನುಭವಿಸುತ್ತಾರೆ. ಆದರೆ  ಮಾರುಕಟ್ಟೆ ವ್ಯವಹಾರದ ಬಗ್ಗೆ ಕನಿಷ್ಠ ಜ್ಞಾನವು ಇಲ್ಲದ ಈ ರೈತರು ತಮ್ಮ ಸಂಘದ
ಉತ್ಪನ್ನಗಳಿಗೆ ಮಾರುಕಟ್ಟೆಯ ಗ್ರಾಹಕರಿಗೆ ರಿಯಾಯಿತಿ ಕೊಟ್ಟು ಲಾಭ ಪಡೆಯುತ್ತಿರೋದು ವಿಶೇಷ.

 


Share this Story:

Follow Webdunia kannada

ಮುಂದಿನ ಸುದ್ದಿ

ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಅಂಥದ್ದೇನಾಗಿದೆ?