ದಾರಿಯಲ್ಲಿ ಓಡಾಡುವಂತ ಜನರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದಂತಹ ಗ್ಯಾಂಗ್ ನ ಹೆರೆಮುಡಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ನಿರ್ಜನ ಪ್ರದೇಶದಲ್ಲಿ ಓಡಾಡುವಂತ ಜನರನ್ನು ಟಾರ್ಗೆಟ್ ಮಾಡುತ್ತಿದ್ದ ಸುಲಿಗೆ ಕೋರರ ತಂಡ ಅವರ ಬಳಿ ಇರುವಂತಹ ಮೊಬೈಲ್, ಹಣವನ್ನು ಕಿತ್ತು ಪರಾರಿಯಾಗುತ್ತಿದ್ದರು.
ಈ ಖದೀಮರಿಗಾಗಿ ಬಲೆ ಬೀಸಿದ ಮಾರತ್ತಹಳ್ಳಿ ಪೊಲೀಸರು ಸುಲಿಗೆ ಮಾಡುತ್ತಿದ್ದ ತಿ ಮ್ಮರಾಜು, ರುದ್ರಪ್ಪ, ಸುಬ್ರಮಣಿ, ಕರುಣಾಕರ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 70 ಸಾವಿರ ಬೆಲೆಯ ಸ್ಯಾಂಸಂಗ್ ಎಸ್ 9 ಪ್ಲಸ್ ಮೊಬೈಲ್, ಕೃತ್ಯಕ್ಕೆ ಬಳಸುತ್ತಿದ್ದ ಟೋಯೋಟೊ ಇಟಿಯಾಸ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಾರತ್ತಹಳ್ಳಿ ಪೋಲಿಸರು ಆರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ.