Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಪ್ಪು ಕಾಗದಕ್ಕೆ ಲಿಕ್ವಿಡ್ ಹಾಕಿದ್ರೆ ನೈಜ ನೋಟಾಗುತ್ತೆ ಎಂದ ವಂಚಕರು ಅರೆಸ್ಟ್

ಕಪ್ಪು ಕಾಗದಕ್ಕೆ ಲಿಕ್ವಿಡ್ ಹಾಕಿದ್ರೆ ನೈಜ ನೋಟಾಗುತ್ತೆ ಎಂದ ವಂಚಕರು ಅರೆಸ್ಟ್
ಬಾಗಲಕೋಟೆ , ಗುರುವಾರ, 10 ಜನವರಿ 2019 (06:59 IST)
ಬಾಗಲಕೋಟೆ : ಕಪ್ಪು ಕಾಗದಕ್ಕೆ ಲಿಕ್ವಿಡ್ ಹಾಕಿದ್ರೆ ನೈಜ ನೋಟಾಗಿ ಬದಲಾಗುತ್ತವೆ ಎಂದು ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ ವಂಚಕರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಗುಳೇದಗುಡ್ಡ ಪಟ್ಟಣದ ನಿವಾಸಿಗಳಾದ ಸೋಮಶೇಖರ್ ಹಳ್ಳೂರ, ಮಲ್ಲಿಕಾರ್ಜುನ ತೋರಗಲ್, ಈರಣ್ಣ ಹಾದಿಮನಿ ಬಂಧಿತ ಆರೋಪಿಗಳಾಗಿದ್ದು, ಮರಿಯಪ್ಪ ಮಾದರ ಎಂಬ ಆರೋಪಿ ಪರಾರಿಯಾಗಿದ್ದಾನೆ. ಈ ನಾಲ್ವರು ಸೇರಿ ನೋಟಿನಾಕಾರದ ಕಪ್ಪು ಕಾಗದವನ್ನು ಜನರಿಗೆ ನೀಡಿ ಇದಕ್ಕೆ ನಾವು ಕೊಡುವ ಲಿಕ್ವಿಡ್ ಹಾಕಿದ್ರೆ ಅಸಲಿ 500 ಹಾಗೂ 2000 ಮುಖಬೆಲೆಯ ನೋಟು ಆಗುತ್ತೆ ಎಂದು ಜನರನ್ನು ವಂಚಿಸುತ್ತಿದ್ದರು.

 

ಗುಳೇದಗುಡ್ಡ ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿ ನಡೆಯುತ್ತಿದ್ದ ಈ ದಂದೆಯ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿ ಅವರ  ಬಳಿ ಇದ್ದ 2 ಸಾವಿರ ರೂ. ಮುಖಬೆಲೆಯ ಎರಡು ಖೋಟಾ ನೋಟನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಬ್ರೇಕ್ ಅಪ್ ಮಾಡಿದ್ದಕ್ಕೆ ಪ್ರೇಯಸಿಗೆ ಪ್ರಿಯತಮ ಮಾಡಿದ್ದೇನು ಗೊತ್ತಾ?