ಕೃಷಿ ಹೊಂಡದಲ್ಲಿ ಸಾಕಣೆ ಮಾಡಿದ್ದ ಮೀನುಗಳಿಗೆ ದುರ್ಷ್ಕಮಿಗಳು ವಿಷ ಹಾಕಿದ್ದಾರೆ.. ಹೀಗಾಗಿ ಕೃಷಿ ಹೊಂಡದಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಈ ಘಟನೆ ಕೋಲಾರದ ಕೆಜಿಎಫ್ ತಾಲ್ಲೂಕಿನ ದೊಡ್ಡಗಾಂಡ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಶ್ರೀನಿವಾಸಪ್ಪ ಕಳೆದ 6 ತಿಂಗಳ ಹಿಂದೆ ಕೃಷಿ ಹೊಂಡಕ್ಕೆ ಮೀನು ಮರಿ ಬಿಟ್ಟಿದ್ದರು. ಕೃಷಿ ಹೊಂಡಕ್ಕೆ ವಿಷ ಸಿಂಪಡಣೆ ಮಾಡಿ ದುಷ್ಕರ್ಮಿಗಳು ಮೀನುಗಳ ಮಾರಣಹೋಮ ಮಾಡಿದ್ದಾರೆ. ಈ ಸಂಬಂಧ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.