ಕಳೆದ 23 ವರುಷಗಳಿಂದ ಬಾಕಿ ಇದ್ದ ಪಾಲುವಾಟನಿ ದಾವೆ ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥವಾಯಿತು. ಅದೇ ರೀತಿ ಬಸವನಬಾಗೇವಾಡಿ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದ ಎರಡೂ ಜೋಡಿಗಳನ್ನು ಜನತಾ ನ್ಯಾಯಾಲಯವು ರಾಜೀ ಸಂಧಾನದ ಮೂಲಕ ಒಂದು ಮಾಡಿದ್ದು ಸಹ ಮತ್ತೊಂದು ವಿಶೇಷ.
ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ಆಸ್ತಿಯ ವಿಭಾಗ ಕೋರಿದ 114 ದಾವೆಗಳು, 94 ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿದ 54 ಪ್ರಕರಣಗಳು ಸೇರಿದಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಒಟ್ಟು 6,259 ಪ್ರಕರಣಗಳು ಜನತಾ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿವೆ. ಇದರಿಂದ ಸರಕಾರಕ್ಕೆ ಹಾಗೂ ಕಕ್ಷಿದಾರರಿಗೆ ಸೇರಿ ಒಟ್ಟು 14,30,24,166 ಪರಿಹಾರಧನ ಒದಗಿಸಲಾಗಿದೆ. ಅದರಂತೆ 40,302 ವ್ಯಾಜ್ಯ ಪೂರ್ವ ಪ್ರಕರಣಗಳು ಜನತಾ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿವೆ.