ಪ್ರಕರಣವೊಂದರಲ್ಲಿ ಪತಿ-ಪತ್ನಿ ಇಬ್ಬರು ದೂರವಾಗಿ ಪರಸ್ಪರ ವೃತ್ತಿಯ ಬಗ್ಗೆ ಗಮನ ಹರಿಸಲು ನಿರ್ಧರಿಸಿ ಸಮ್ಮತಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿವಾಹ ವಿಚ್ಛೇದನ ಮಂಜೂರಾತಿಗೆ ಇರುವ ಒಂದು ವರ್ಷದ ಕಡ್ಡಾಯ ಅವಧಿಯನ್ನು ಅಂದ್ರೆ ಕೂಲಿಂಗ್ ಪಿರಿಯಡ್ ಮನ್ನಾ ಮಾಡಿ ವಿಚ್ಛೇದನಕ್ಕೆ ಹಾದಿ ಸುಗಮಗೊಳಿಸಿದೆ.ಬೆಂಗಳೂರಿನ ಎಂಜಿನಿಯರ್ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠ, ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿ ಮಧ್ಯಂತರ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.