ಲೋಕಸಭೆ ಚುನಾವಣೆ ಟಿಕೆಟ್ ಮೈತ್ರಿ ಪೂರ್ಣಗೊಂಡ ಬೆನ್ನಲ್ಲೇ ಕ್ಷೇತ್ರಗಳನ್ನು ಮರಳಿ ಪಡೆಯಲು ಕೈ ಪಡೆಯ ನಾಯಕರು ಪರದಾಡುತ್ತಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರ ಮರಳಿ ಪಡೆಯಲು ಕೈ ನಾಯಕರ ಪರದಾಟ ಮುಂದುವರಿದಿದೆ. ಹಾಲಿ ಸಂಸದರು ಇರುವ ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್ ಮುಖಂಡರು ಯತ್ನ ಮುಂದುವರಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗಲು ರಾಜ್ಯ ಕೈ ನಾಯಕರ ಚಿಂತನೆ ನಡೆದಿದೆ.
ತುಮಕೂರು ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಹೆಚ್.ಡಿ. ದೇವೇಗೌಡರ ಮನವೊಲಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತರುವ ಸಾಧ್ಯತೆಗಳು ಗೋಚರಿಸುತ್ತಿವೆ. ತೆರೆಮರೆಯಲ್ಲಿ ಮೇಲೆ ನಡೆಯುತ್ತಿದೆ ಭಾರಿ ಕಸರತ್ತಿನತ್ತ ಮುಂದಿನ ಚಿತ್ತ ನೆಟ್ಟಿದೆ. ಇದೇ ವಿಚಾರವಾಗಿ ಹೆಚ್.ಡಿ. ದೇವೆಗೌಡರನ್ನ ಉಪಮುಖ್ಯಮಂತ್ರಿ ಪರಮೇಶ್ವರ್ ಭೇಟಿ ಮಾಡಿದ್ದರು.
ಇದು ಹೈಕಮಾಂಡ್ ಹಂತದಲ್ಲಿ ಸಮಸ್ಯೆ ಬಗೆ ಹರಿಯಲಿದೆ ಎನ್ನಲಾಗಿದೆ. ತುಮಕೂರು ಕ್ಷೇತ್ರ ಕಾಂಗ್ರೆಸ್ ಗೆ ಬಿಟ್ಟುಕೊಡುವ ವಿಚಾರವಾಗಿ ಹೆಚ್.ಡಿ. ದೇವೇಗೌಡರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ.