ಬೆಂಗಳೂರು : ಸರ್ಕಾರಿ ಬಂಗಲೆಯನ್ನು ತೊರೆಯದ ಮಾಜಿ ಮಂತ್ರಿಗಳಿಗೆ ತಕ್ಕ ಪಾಠ ಕಲಿಸಲು ಇದೀಗ ಕೇಂದ್ರ ಸರ್ಕಾರ ಮುಂದಾಗಿದೆ.
ಸರ್ಕಾರ ಬಿದ್ದುಹೋದ ಬಳಿಕ ಒಂದು ತಿಂಗಳೊಳಗಾಗಿ ಮಾಜಿ ಸಂಸದರು ಬಂಗಲೆ ತೆರವುಗೊಳಿಸಬೇಕೆಂಬ ನಿಯಮವಿದ್ದರೂ ಕೆಲವರು ಬಂಗಲೆ ಖಾಲಿ ಮಾಡದ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಕೆಲವರು ತಕ್ಷಣ ಬಂಗಲೆ ಖಾಲಿ ಮಾಡಿದರೆ, ಇನ್ನೂ ಕೆಲವರು ಈ ನೋಟಿಸ್ ಗೆ ಸ್ಪಂದಿಸದ ಕಾರಣ ಅವರಿಗೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದೀಗ ಕೇಂದ್ರ ಸರ್ಕಾರ, ಸಾರ್ವಜನಿಕ ಆವರಣ ಕಾಯ್ದೆಯಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಇದರ ಜೊತೆಗೆ ನೀರು, ವಿದ್ಯುತ್ ಮತ್ತು ಅಡುಗೆ ಅನಿಲದಂತಹ ಮೂಲಸೌಕರ್ಯಗಳನ್ನು ಕಡಿತಗೊಳಿಸುವ ನಿರ್ಧಾರ ಮಾಡಿದೆ ಎನ್ನಲಾಗಿದೆ.