ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿನ ಅಪರಾಧ ಪ್ರಕರಣಗಳ ಸಭೆಯನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮಾಡಲಿ ನಂತರ ಕರ್ನಾಟಕದ ವಿರುದ್ಧ ಮಾತನಾಡಲಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ನರೇಂದ್ರಮೋದಿ ಅವರು ಕರ್ನಾಟಕ ಅಪರಾಧಗಳ ರಾಜ್ಯವೆಂದು ನೀಡಿದ ಹೇಳಿಕೆಯನ್ನು ವಿರೋಧಿಸಿದ್ದಾರೆ.
ಗೋದ್ರಾ ದುರಂತ ನಡೆದಾಗ ಮೋದಿ ಅವರಿಗೆ ಜವಾಬ್ದಾರಿ ಇರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಗುಜರಾತಿನಲ್ಲಿ ಅಪರಾಧಗಳು ಎಷ್ಟೊಂದು ನಡೆಯುತ್ತಿದ್ದವು ಆಗ ಮೋದಿ ಅವರ ಇಂಟಲಿಜೆನ್ಸ್ ಕೆಲಸ ಮಾಡುತ್ತಿರಲಿಲ್ಲವೇ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.