ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 50 ಸಾವಿರ ಮತದಾರರನ್ನ ಡಿಲಿಟ್ ಮಾಡಿದ್ದಾರೆ. ಕೆಲವು ಕಡೆ ಹೆಂಡತಿ ಹೆಸರು ಡಿಲೀಟ್ ಮಾಡಿದ್ರೆ, ಕೆಲವು ಕಡೆ ಗಂಡನ ಹೆಸರು ಡಿಲೀಟ್ ಮಾಡಿದ್ದಾರೆ. ಹೀಗಂತ ಬಿಜೆಪಿ ಆರೋಪ ಮಾಡಿದೆ.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ಮಾಧ್ಯಮಗೋಷ್ಠಿ ನಡೆಸಿದ್ರು. ನಿನ್ನೆ ನಡೆದ ಚುನಾವಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ಮತದಾರರ ಹೆಸರನ್ನು ಡಿಲೀಟ್ ಮಾಡಿದ್ದಾರೆ. ಅಮೆರಿಕಾದಿಂದ ಮತ ಚಲಾಯಿಸಲು ಬಂದವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಅಮೇರಿಕಾದಿಂದ ಬಂದವರಿಗೆ ವೋಟ್ ಇಲ್ಲ ಅಂದ್ರೆ ಹೇಗೆ..? ಇದು ಅಧಿಕಾರಿಗಳ ಕೈವಾಡ, ಶಾಮೀಲು ಆಗಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಮಣಿಪಾಲದಿಂದ ಮತ ಹಾಕೋದಕ್ಕೆ ಬಂದವರ ಹೆಸರು ಇಲ್ಲ. ಏಕಾಏಕಿ ಲೀಸ್ಟ್ ನಲ್ಲಿ ಡಿಲೀಟ್ ಮಾಡಿದ್ರೆ, ಅದು ಯಾರ ಕೈವಾಡ ಅಂತ ಗೊತ್ತಾಗಬೇಕಿದೆ ಎಂದರು. ಯಾರಾದ್ರೂ ನನ್ನ ಹೆಸರು ತೆಗೆಯಿರಿ ಅಂತ ಕೇಳಿಲ್ಲ. ಹೀಗಿರುವಾಗ ಯಾಕೆ ಡಿಲೀಟ್ ಮಾಡಿದ್ದಾರೆ. ಆ ಬಗ್ಗೆ ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯ ಮಾಡಿದ್ರು.
ಮುಂದೆ ಈ ರೀತಿ ಆಗಬಾರದು, ಹೀಗಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು.