ರಾಜೇಶ್, ಶಣ್ಮುಗಂ ಬಂಧಿತ ಆರೋಪಿಗಳು. ಈ ಗ್ಯಾಂಗ್ ನವರು ರಸ್ತೆಯಲ್ಲಿ 10, 20 ರೂಪಾಯಿ ಬಿಸಾಡಿ ನಿಮ್ಮ ದುಡ್ಡು ಬಿದ್ದಿದೆ ನೋಡಿ ಎಂದು ಅವರ ಗಮನ ಬೇರೆಡೆ ಸೆಳೆದು ಹಣ ಎಗರಿಸುತ್ತಿದ್ದರು, ಎ.ಟಿ.ಎಂ, ಬ್ಯಾಂಕ್, ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಬರುವ ಸಾಮಾನ್ಯ ಜನರನ್ನು ಟಾರ್ಗೆಟ್ ಮಾಡಿ, ಹಣ ದೋಚುತ್ತಿದ್ದರು. ಈ ಓಜಿಕುಪ್ಪಂ ಜಾಲ ಇತ್ತೀಚೆಗೆ ಆಂಧ್ರ, ಕರ್ನಾಟಕ ಗಡಿನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಚಿಂತಾಮಣಿ, ಚಿಕ್ಕಬಳ್ಳಾಪುರ ಗೌರಿಬಿದನೂರು, ಬಾಗೇಪಲ್ಲಿ ಗುಡಿಬಂಡೆ ಹಾಗೂ ಆಂಧ್ರದ ಗೊರಂಟ್ಲದಲ್ಲಿ ಹೆಚ್ಚು ಆಕ್ವೀವ್ ಆಗಿತ್ತು.
ಈ ಗ್ಯಾಂಗ್ ನ ರಾಜೇಶ್, ಶಣ್ಮುಗಂ ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರದಲ್ಲಿ ತಮ್ಮ ಕೈಚಳಕ ತೋರಿ ಕೊಳವನಹಳ್ಳಿ ನಿವಾಸಿ ಜಯರಾಮಯ್ಯ ಹಾಗೂ ರತ್ನಮ್ಮ ದಂಪತಿಯ ಮೂರುವರೆ ಲಕ್ಷ ರೂ ಹಣ ಕೊಳ್ಳೆಹೊಡೆದ ಕಾರಣ ಅವರು ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ್ವಯ ಪೊಲೀಸರು ಆರೋಪಿಗಳು ಬಳಸಿದ್ದ ಮೊಬೈಲ್ ಗಳ ಮೂಲಕ ಟ್ರೇಸ್ ಮಾಡಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 11.80 ಲಕ್ಷ ರೂ, 2 ಬೈಕ್ ಜಪ್ತಿ ಮಾಡಿದ್ದ ಪೊಲೀಸರು ಹಣ ಕಳೆದುಕೊಂಡ ಸಾಮಾನ್ಯ ಜನರಿಗೆ ಮರಳಿ ಹಣ ಸಿಗುವಂತೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.