ಎಲ್ಲರೂ ನಗನಾಣ್ಯ ಕಳ್ಳತನ ಮಾಡಿದ್ರೆ,ಇಲೊಬ್ಬ ಕಳ್ಳ ಮಾತ್ರ ಎಳನೀರು ಟಾರ್ಗೆಟ್ ಮಾಡ್ತಿದ್ದ ಅಸಾಮಿಯನ್ನ ಪೊಲೀಸರು ಬಂಧಿಸಿದ್ದಾರೆ.
ಗಿರಿನಗರ ಪೊಲೀಸರಿಂದ ಮೋಹನ್ ಎಂಬಾತನ ಬಂಧನವಾಗಿದ್ದು,ಕಳೆದ ಮೂರು ತಿಂಗಳಿಂದ ಮೋಹನ್ ಎಂಬಾಂತ ಎಳನೀರು ಖದೀಯುತ್ತಿದ್ದ.ಎಳನೀರು ಕದಿಯಲೆಂದೆ ಕಾರಿನಲ್ಲಿ ಅಸಾಮಿ ಬರುತ್ತಿದ್ದ .ರಾತ್ರಿ ವೇಳೆ ರಸ್ತೆ ಬದಿಯ ಎಳನೀರು ಅಂಗಡಿಗಳಲ್ಲಿ ಕಳ್ಳತನ ಮಾಡ್ತಿದ್ದ.ಗಿರಿನಗರದ ಮಂಕುತಿಮ್ಮನ ಪಾರ್ಕ್ ಬಳಿ ಇತ್ತೀಚಿಗೆ ಎಳನೀರು ಕಳ್ಳತನವಾಗಿತ್ತು.ರಾಜಣ್ಣ ಎಂಬುವರ 1150 ಎಳನೀರು ಆರೋಪಿ ಮೋಹನ್ ಕದಿದ್ದ.ಎಳನೀರು ವ್ಯಾಪಾರಿ ರಾಜಣ್ಣರಿಂದ ಗಿರಿನಗರ ಠಾಣೆಗೆ ದೂರು ನೀಡಲಾಗಿದ್ದು,ಸಿಸಿಟಿವಿಗಳ ಪರಿಶೀಲನೆ ನಡೆಸಿ ಪೊಲೀಸರು ಮೋಹನ್ ನ್ನ ಬಂಧಿಸಿದ್ದಾರೆ.
ಬಂಧಿತನಿಂದ ಎಳನೀರು ಸೇರಿ ಎಂಟು ಲಕ್ಷ ಮೌಲ್ಯದ ಒಂದು ಕಾರು, ರಾಯಲ್ ಎನ್ ಫೀಲ್ಡ್ ಬೈಕ್ ವಶಕ್ಕೆ ಪಡೆದಿದ್ದಾರೆ.ಪೊಲೀಸರ ತನಿಖೆ ವೇಳೆ ಎಳನೀರು ಕಳ್ಳನ ಜೂಜಾಟ ಬೆಳಕಿಗೆ ಬಂದಿದೆ.ಆನ್‌ಲೈನ್ ನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಹಣ ಆರೋಪಿ ಕಳೆದುಕೊಂಡಿದ್ದ .ಸಾಲ ಜಾಸ್ತಿ ಆಗಿದ್ದರಿಂದ ಎಳನೀರು ಕಳ್ಳತನಕ್ಕೆ ಪ್ಲಾನ್ ನಡೆಸಿದ.ಪ್ರತಿದಿನ ಕಾರು ಬಾಡಿಗೆಗೆ ಪಡೆದು ಎಳನೀರು ಕಳ್ಳತನಕ್ಕೆ ಅಸಾಮಿ ಬರುತ್ತಿದ್ದ.ಈ ಹಿಂದೆ ಆರೋಪಿ ಎಳನೀರು ವ್ಯಾಪಾರಿಯಾಗಿದ್ದ .
ಫ್ರೀ ಟೈಂನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ.ನಂತರ ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಓಡಿಸುತ್ತಿದ್ದ.ನಂತರ ಟ್ಯಾಕ್ಸಿ ಬಿಟ್ಟು ರಾತ್ರಿ ವೇಳೆ ಎಳನೀರು ಕಳ್ಳತನಕ್ಕೆ ಇಳಿದಿದ್ದ.ಕದ್ದ ಎಳನೀರು ಮಾರಾಟಕ್ಕೆ ಪರ್ಮನೆಂಟ್ ಕಸ್ಟಮರ್ ಇಟ್ಕೊಂಡಿದ್ದ .ಎಳನೀರು ವ್ಯಾಪಾರಿಯೊಬ್ಬನಿಗೆ ಮದ್ದೂರು ಎಳನೀರು ಅಂತಾ ಮಾರಾಟ ಮಾಡಿ ಹೋಗುತ್ತಿದ್ದ.ಡೈಲಿ 100-150 ಎಳನೀರು ಕದ್ದು ಮಾರಾಟ ಮಾಡ್ತಿದ್ದ.ತಮಿಳುನಾಡು ಮೂಲದ ಆರೋಪಿ ಮೋಹನ್ ಆಗಿದ್ದು,ಮಡಿವಾಳದಲ್ಲಿ ವಾಸವಾಗಿದ್ದ.ಇದೀಗ ಎಳನೀರು ಕಳ್ಳನನ್ನ ಬಂಧಿಸಿ ಗಿರಿನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.