ಗಣಿನಾಡಿನಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ರೈತರು ಹೈರಾಣಾಗುತ್ತಿದ್ದಾರೆ. ಗಣಿನಾಡು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸೋಮಪ್ಪ ಕೆರೆ ಪಕ್ಕದ ಜಮೀನಿನಲ್ಲಿ ಹುಲ್ಲನ್ನು ಜಾನುವಾರುಗಳಿಗೆ ತಿನ್ನಲು ಸಂಗ್ರಹಿಸಿಡಲಾಗಿತ್ತು. ಆದರೆ ಕೆಲವು ಕಿಡಿಗೇಡಿಗಳು ಸುಮಾರು 20 ಹೆಚ್ಚು ಎಕರೆಯಲ್ಲಿ ಸಂಗ್ರಹಿಸಲ್ಪಟ್ಟಿದ್ದ ಒಣ ಮೇವಿಗೆ ಬೆಂಕಿ ಹಚ್ಚಿರುವ ಘಟನೆ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಸೋಮಪ್ಪ ಕೆರೆ ಬಳಿಯ ದೇವಸ್ಥಾನದ ಹತ್ತಿರ ನಡೆದಿದೆ. ಇನ್ನೂ ಈ ಬಣವೆಗಳು ರೈತರಾದ ಮಹಾನಂದಿ, ವೆಂಕಟರಮಣ ಅವರಿಗೆ ಸೇರಿದ್ದಾಗಿವೆ.
ಘಟನ ಸ್ಥಳಕ್ಕೆ ಹತ್ತಿರದ ಗಂಗಾವತಿ ತಾಲೂಕಿನ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಇನ್ನೂ ಬೆಂಕಿಯ ಕೆನ್ನಾಲಿಗೆಗೆ ಒಣ ಮೇವು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಕಿಡಿಗೇಡಿಗಳ ಕಾಟ ಪದೇ ಪದೇ ಮರುಕಳಿಸುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.