Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಹೋದರಿಯ ಆರೈಕೆಗೆ ಬಂದ ಹೋಂ ನರ್ಸ್ ಮೇಲೆ ಅತ್ಯಾಚಾರ ಎಸಗಿದ 70 ವರ್ಷದ ವೃದ್ಧ

ಸಹೋದರಿಯ ಆರೈಕೆಗೆ ಬಂದ ಹೋಂ ನರ್ಸ್ ಮೇಲೆ ಅತ್ಯಾಚಾರ ಎಸಗಿದ 70 ವರ್ಷದ ವೃದ್ಧ
ಕಾರವಾರ , ಶುಕ್ರವಾರ, 21 ಸೆಪ್ಟಂಬರ್ 2018 (06:55 IST)
ಕಾರವಾರ : 70 ವರ್ಷದ ವೃದ್ಧನೊಬ್ಬ ಅನಾರೋಗ್ಯಕ್ಕೊಳಗಾದ ತನ್ನ ಸಹೋದರಿಯ ಆರೈಕೆಗೆ ಕರೆತಂದ 39 ವರ್ಷದ ಹೋಂ ನರ್ಸ್ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಾರವಾರ ತಾಲೂಕಿನ ಮಾಜಾಳಿ ಸಾವಂತ ವಾಡದಲ್ಲಿ ನಡೆದಿದೆ.


ದಿನಕರ ಸಾವಂತ್ ಎಂಬ 70 ವರ್ಷದ ಮುದುಕ, ಅನಾರೋಗ್ಯ ಪೀಡಿತಳಾಗಿದ್ದ ತನ್ನ ತಂಗಿಯ ಆರೈಕೆಗೆ ಪುಣೆಯಿಂದ 39 ವರ್ಷದ ಹೋಂ ನರ್ಸ್ ಒಬ್ಬಳನ್ನು ಕರೆತಂದಿದ್ದ. ಆದರೆ ಕಳೆದ ಕೆಲ ದಿನಗಳ ಹಿಂದೆ ಆಕೆಯನ್ನು ಬಲವಂತವಾಗಿ ರೂಮ್​​ಗೆ ಕರೆದೊಯ್ದು ವೃದ್ಧ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.


ಇದರಿಂದ ಮಹಿಳೆ ಕೆಲಸ ಬಿಟ್ಟು ಊರಿಗೆ ತೆರಳಿ ಸಂಬಂಧಿಕರೊಬ್ಬರ ಜತೆ ಬಂದು ಬುಧವಾರ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ‌ಹುಡುಕಾಟ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಜತೆಗೆ ಹುಡುಗನನ್ನು ನೋಡಿ ಆಕೆಯ ತಂದೆ ಮಾಡಿದ್ದನ್ನು ಕೇಳಿದ್ರೆ ಶಾಕ್ ಆಗ್ತೀರಾ!