ಬೆಂಗಳೂರು: ಐಟಿ ಕೇಂದ್ರವೆನಿಸಿರುವ ಪ್ರತಿಷ್ಠಿತ ಟೆಕ್ ಪಾರ್ಕ್ ನಲ್ಲಿ ಮಹಿಳಾ ಉದ್ಯೋಗಿಗೆ ಟೀಂ ಲೀಡರ್ ನಿಂದಲೇ ಲೈಂಗಿಕ ಕಿರುಕುಳವಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರತಿಷ್ಠಿತ ಐಟಿ ಕೇಂದ್ರದಲ್ಲೇ ಈ ಕೃತ್ಯ ನಡೆದಿದ್ದು, ಟೀಂ ಲೀಡರ್ ಧೀರಜ್ ಶೆಟ್ಟಿ ಎಂಬಾತನ ವಿರುದ್ಧ ಯುವತಿ ಬೆಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಕೆಲಸದ ನೆಪದಲ್ಲಿ ಆರೋಪಿ ಧೀರಜ್ ಶೆಟ್ಟಿ ಮಹಿಳಾ ಉದ್ಯೋಗಿಯ ಮೈ ಮೇಲೆ ಕೈಯಾಡಿಸಿ ಅಸಭ್ಯ ವರ್ತನೆ ತೋರುತ್ತಿದ್ದನಂತೆ. ಆದರೆ ಈ ಬಗ್ಗೆ ಕಂಪನಿ ಮೇಲಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ