ಪಾಠ ಹೇಳಿಕೊಡಬೇಕಾದ ಶಿಕ್ಷಕರೇ ವಿದ್ಯಾರ್ಥಿಗೆ ಬೂಟ್ ಕಾಲಿನಿಂದ ಒದೆಸಿದ್ದು, ಶಿಕ್ಷಕ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ.
ಎರಡನೇ ತರಗತಿ ವಿದ್ಯಾರ್ಥಿಗೆ ಬೂಟ್ ಕಾಲಿನಿಂದ ಒದೆಸಿದ ಶಿಕ್ಷೆ ನೀಡಲಾಗಿದೆ. ಮಾಡಿದ ಸಣ್ಣ ತಪ್ಪಿಗೆ ವಿದ್ಯಾರ್ಥಿಗೆ ಬೂಟ್ ಪೂಜೆ ಮಾಡಿದ್ದಾರೆ ಆಡಳಿತ ಮಂಡಳಿಯವರು.
ಒಬ್ಬ ವಿದ್ಯಾರ್ಥಿಗೆ 40 ಜನ ವಿದ್ಯಾರ್ಥಿಗಳಿಂದ ಬೂಟ್ ಕಾಲಿನಿಂದ ಒದೆಸಿದ್ದಾರೆ ಶಿಕ್ಷಕರು. 2 ನೇ ತರಗತಿ ವಿದ್ಯಾರ್ಥಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ.
ಶಾಲಾ ಸಿಬ್ಬಂದಿಯ ದಬ್ಬಾಳಿಕೆ ಬೇಸತ್ತ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೂರಮಾಕನಹಳ್ಳಿ ಬಳಿ ಇರುವ ಜೋತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಘಟನೆ ನಡೆದಿದೆ.
ಮುಂಜಾನೆ 8 ರಿಂದ ಬಿಸಿಲನಲ್ಲಿಯೇ ವಿದ್ಯಾರ್ಥಿಯನ್ನು ನಿಲ್ಲಿಸಿದ್ದಾರೆ ಶಾಲಾ ಸಿಬ್ಬಂದಿ. ಪೋಷಕರನ್ನು ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಹೊರದಬ್ಬಿಸಿದ್ದಾರೆ ಆಡಳಿತ ಮಂಡಳಿಯವರು. ಇಲ್ಲಿಗೆ ಪಿಎಂ ಬಂದ್ರು ನೋ ಎಂಟ್ರಿ ಎಂದು ಸರ್ವಾಧಿಕಾರ ತೋರಿದ್ದಾರೆ ಶಾಲಾ ಆಡಳಿತ ಮಂಡಳಿಯವರು ಅಂತ ಪೋಷಕರು ದೂರಿದ್ದಾರೆ.
ಶಾಲಾ ಮ್ಯಾನೆಜಮೆಂಟ್ ಶಪೀ ಯಿಂದ ಹಿಂಟ್ಲರ್ ಆಡಳಿತ ನಡೆಯುತ್ತಿದೆ ಎಂದು ಟೀಕೆ ಮಾಡಲಾಗಿದೆ. ಶಾಲಾ ಆಡಳಿತ ಮಂಡಳಿ ಧೋರಣೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಪೋಷಕರು ಮತ್ತು ಪೊಲೀಸರ ನಡುವೆ ನೂಕುನುಗ್ಗಲು ಉಂಟಾಗಿತ್ತು. ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.