ತಾಲ್ಲೂಕಿನ ಮುರೋಳ ಗ್ರಾಮದಲ್ಲಿ ಕಳೆದ ವಾರ ನಡೆದ ಕೊಲೆ ಪ್ರಕರಣದ ರಹಸ್ಯ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದೈಹಿಕ ಶಿಕ್ಷಕರಾಗಿದ್ದ ಬಾಬುರೆಡ್ಡಿ ನೀಲರೆಡ್ಡಿ ಮೈದೂರ್ ಅವರ ಹತ್ಯೆ ಆರೋಪದ ಮೇಲೆ ಅವರ ಪತ್ನಿ ಸೇರಿ ಮೂವರು ಆರೋಪಿಗಳನ್ನು ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈದೂರ್ ಪತ್ನಿ ಮಂಜುಳಾ( 45) ಆಕೆಯ ತಂಗಿ ರಾಜಲಕ್ಷ್ಮಿ ತಿಮ್ಮರಾಜಪ್ಪ(42) ಮತ್ತು ಮಂಜುಳಾರ ಅಕ್ಕನ ಮಗ ತಮಿಳುನಾಡಿನ ನಿವಾಸಿ ಜಗನ್ ವಿಶ್ವನಾಥನ್ (42) ಬಂಧಿತ ಆರೋಪಿಗಳಾಗಿದ್ದಾರೆ.
ಪತ್ನಿ ಜತೆ ಬಾಬುರೆಡ್ಡಿ ಸಂಬಂಧ ಚೆನ್ನಾಗಿರಲಿಲ್ಲ. ಕೌಟುಂಬಿಕ ಕಲಹ ಮತ್ತು ಪತಿಯ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ ನೀಡುತ್ತಿದ್ದ ಮಾನಸಿಕ ಹಿಂಸೆಗೆ ರೋಸಿ ಹೋಗಿದ್ದ ಪತ್ನಿ ಮಂಜುಳಾ ಕಳೆದ ಎರಡು ತಿಂಗಳಿಂದ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಅಂತೆಯೇ ಅಕ್ಟೋಬರ್ 24 ರಂದು ಚಿಕ್ಕಮ್ಮನ ಮನೆಗೆ ಬಂದಿದ್ದ ಜಗನ್ ಆಕೆಯ ಪತಿಯ ಕತ್ತು ಸೀಳಿ ಪರಾರಿಯಾಗಿದ್ದ.
ಘಟನೆ ನಡೆದ ಮೂರು ದಿನಗಳಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ