ಶಕ್ತಿ ಯೋಜನೆಯಿಂದಾಗಿ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬಿಎಂಟಿಸಿ ಇತ್ಯಾದಿ ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ.
ನಾಲ್ಕು ನಿಗಮಗಳಿಗೆ ಒಂದು ವರ್ಷದಲ್ಲಿ ಒಟ್ಟು 541.87 ಕೋಟಿ ರೂನಷ್ಟು ಮೋಟಾರು ವಾಹನ ತೆರಿಗೆಯಲ್ಲಿ ವಿನಾಯಿತಿ ಸಿಗಲಿದ್ದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಸ್ತಾಪಿಸಿರುವ ಈ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ ಅಂತಾ ಮೂಲಗಳು ತಿಳಿಸಿವೆ.