ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಜಗಳಗಂಟಿಯಾಗಿದ್ದಾರೆ. ಯಾವಾಗಲು ಜಗಳವಾಡುವುದೇ ಅವರ ಅಭ್ಯಾಸವಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಹರಿಸುವಂತೆ ಕೋರುವುದು ಯಾವ ನ್ಯಾಯ. ಬೇಕಿದ್ದರೆ ರಾಜ್ಯದ ಜಲಾಶಯಗಳಲ್ಲಿ ನೀರಿನ ಹರಿವಿನ ಬಗ್ಗೆ ಸ್ವಂತ ಬಂದು ವೀಕ್ಷಣೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದು ಸಾಧ್ಯವಿಲ್ಲ. ಒಂದು ವೇಳೆ, ರಾಜ್ಯ ಸರಕಾರ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಟ್ಟಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸರಕಾರವನ್ನು ಎಚ್ಚರಿಸಿದ್ದಾರೆ.
ನೀವು ಬದುಕಿ, ಬದುಕಲು ಬಿಡಿ ಪದದ ಅರ್ಥ ತಿಳಿಯುತ್ತಿಲ್ಲ., ಕೇಳಲು ಚೆನ್ನಾಗಿದೆ. ಡ್ಯಾಂಗಳ ನೀರಿನ ಮಟ್ಟವನ್ನು ಜಡ್ಜ್ಗಳು ಖುದ್ದ ಬಂದು ಪರಿಶೀಲಿಸಿ ತೀರ್ಪು ನೀಡಲಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ