ಮೋದಿ ಅವರು ಪ್ರಧಾನಿಯಾದ ನಂತರ ಸರ್ಕಾರದ ಎಲ್ಲ ಸ್ವತಂತ್ರ ಸಂಸ್ಥೆಗಳನ್ನು ತಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದಾರೆ. ಆರ್ ಬಿಐ, ಸಿಎಜಿ, ಸಿಬಿಐ, ಇಡಿ, ಎನ್ಎಸ್ಎಸ್ಒ ಎಲ್ಲ ಸಂಸ್ಥೆಗಳನ್ನು ಇವರ ತಾಳಕ್ಕೆ ಕುಣಿಯುವಂತೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆ, ಇಡಿ ವಿಭಾಗವನ್ನು ವಿರೋಧ ಪಕ್ಷಗಳ ಮೇಲೆ ಛೂ ಬಿಡಲು ಇಟ್ಟುಕೊಂಡಿದೆ. ದೇಶದ ಇತಿಹಾಸದಲ್ಲಿ ಇಂತಹ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಂಡ ನಿದರ್ಶನಗಳಲ್ಲಿ.
ಇಂದು ದೇಶದ ಪ್ರಗತಿ ಇಂಕಿ ಅಂಶಗಳು ಸಿಗಬಾರದು ಎಂದು ಎನ್ಎಸ್ಎಸ್ಒ ನಿಷ್ಕೃಯಗೊಳಿಸಿ, ಯೋಜನಾ ಆಯೋಗ ತೆಗೆದು, ತಾಳಕ್ಕೆ ಕುಣಿಯುವ ನೀತಿ ಆಯೋಗ ರಚಿಸಿದ್ದಾರೆ. ಆಮೂಲಕ ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು, ಇಡೀ ದೇಶದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಮೇಲೆ ಇಡಿ ಮೂಲಕ ಸುಳ್ಳು ಕೇಸ್ ನಲ್ಲಿ ಕಿರುಕುಳ ನೀಡುವ ಕೆಲಸ ಮೋದಿ ಮಾಡಲು ಹೊರಟಿದ್ದಾರೆ. ಇದರ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.
ನಾವಿಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಲು ಹೋರಾಟ ಮಾಡುತ್ತಿದ್ದೇವೆ. ಸುಳ್ಳು ಕೇಸ್ ಹಾಕುತ್ತಿರುವುದರ ವಿರುದ್ಧ ಹೋರಾಟ. ಕಾನೂನನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಅದು ಎಲ್ಲರಿಗೂ ಸಮಾನವಾಗಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹುಟ್ಟುಕೊಂಡಿದ್ದು, ದೇಶದಲ್ಲಿ ಸ್ವಾತ್ತ್ರ್ಯ ಕಿಚ್ಚು ಹಚ್ಚಿಸಲು.
ಆರ್ ಎಸ್ಎಸ್ ನವರು ಹೆಡೆಗೆವಾರ್, ಗೋಲ್ವಾಲ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರಾ? ನಿಮಗೆ ಯಾವ ಯೋಗ್ಯತೆ ಇದೆ? 1942ರ ಕ್ವಿಟ್ ಇಂಡಿಯಾ ಹೋರಾಟದಲ್ಲಿ ನಿಮ್ಮ ಆರ್ ಎಸ್ಎಸ್ ಸಂಚಾಲಕರು ಮುಖಂಡರು ಬ್ರಿಟೀಷರ ಜತೆ ಸೇರಿಕೊಂಡು ಸಂಚು ಮಾಡಿ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದ್ದರು ಎಂಬುದನ್ನು ಮರೆಯಲು ಸಾಧ್ಯವಿಲ್ಲ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನ್ಯಾಷನಲ್ ಹೆರಾಲ್ಡ್ ಸಹಾಯ ಮಾಡಿದೆ. ಕಾಂಗ್ರೆಸ್ ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ. ಬಿಜೆಪಿಯವರಿಗೆ ತ್ಯಾಗ ಎಂದರೆ ಗೊತ್ತಾ? ನೀವು ಯಾವತ್ತಾದರೂ ಅದನ್ನು ಮಾಡಿದ್ದೀರಾ? ನೀವು ನಮಗೆ ದೇಶಭಕ್ತಿ ಪಾಠ ಹೇಳಿಕೊಡಲು ಬರುತ್ತೀರಾ? ಇಂದು ಇಡೀ ದೇಶ ಲೂಟಿ ಹೊಡೆದು ಹಾಳು ಮಾಡುತ್ತಿದ್ದೀರಿ.
ಮೋದಿ ಅವರೇ ದು ವರ್ಷದ ಹಿಂದೆ ಗುತ್ತಿಗೆದಾರರ ಸಂಘದವರು ಪತ್ರ ಬರೆದು 40 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ ಎಂದು ತಿಳಿಸಿದರೂ ಒಂದು ತನಿಖೆ ಮಾಡಿಸಲಿಲ್ಲ. ಅದರ ಮೇಲೆ ಇಡಿ ಛೂ ಬಿಟ್ಟಿರಾ? ಯಾರ ಮೇಲಾದರೂ ಕೇಸ್ ಹಾಕಿಸಿದ್ದೀರಾ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಲೂಟಿ ಹೊಡೆದು ಭ್ರಷ್ಟಾಚಾರ ಮಾಡಿದ್ದರಾ? ನಾ ಖಾವೂಂಗಾ ನಾಖಾನೇ ದೂಂಗಾ ಎಂದು ಹೇಳುತ್ತೀರಿ. ಯಾಕೆ ಈ ಸರ್ಕಾರದ ವಿರುದ್ಧ ಕ್ರಮ ಕಗೊಂಡಿಲ್ಲ? ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿ., ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿರುದ್ಧ ಇಡಿ ದಾಳಿ ಮಾಡಿಸಿದ್ದೀರಲ್ಲಾ ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯೇ?
ಇದರಿಂದ ನೀವು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರನ್ನು ಹೆದರಿಸುತ್ತೇವೆ ಎಂದು ನೀವು ಭಾವಿಸಿದ್ದರೆ, ಅದು ಭ್ರಮೆ. ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಹೆದರುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ಗುಂಡಿಗೆ, ಲಾಠಿ ಏಟಿಗೆ ಹೆದರದವರು ನಿಮ್ಮ ಷಡ್ಯಂತ್ರಕ್ಕೆ ಹೆದರುತ್ತೀವಾ? ಇದು ಸಾಂಕೇತಿಕ ಪ್ರತಿಭಟನೆ ಆರಂಭವಾಗಿದೆ. ಇಡೀ ದೇಶದಲ್ಲಿ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಡುತ್ತಾರೆ. ಎಲ್ಲ ಸರ್ಕಾರಿ ಕಚೇರಿ ಬಂದ್ ಮಾಡಬೇಕಾಗುತ್ತದೆ. ಇದು ನಿರಂತರ ಹೋರಾಟ. ಕಾಂಗ್ರೆಸ್ ನಾಯಕರನ್ನು ಹೆದರಿಸುವುದು ಸಾಧ್ಯವಿಲ್ಲ.
ಸಂವಿಧಾನ, ಸುಪ್ರಿಂ ಕೋರ್ಟ್ ಗಳಿವೆ. ಮೋದಿ ಅವರೇ ಈ ಹುಚ್ಚು ಸಾಹಸ ಬಿಡಿ. ಇಲ್ಲದಿದ್ದರೆ ನಿಮಗೆ ಜನ ತಕ್ಕ ಶಾಸ್ತಿ ಮಾಡಲಿದ್ದಾರೆ. ಈ ದ್ವೇಷದ ರಾಜಕಾರಣದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಸಂವಿಧಾನ ವಿರೋಧಿ ನಡೆ ಕೈಬಿಡಿ.
ಇದು ಮಪಕ್ತಾಯವಾಗಿದ್ದ ಪ್ರಕರಣ, ಅವರ ತಪ್ಪಿಲ್ಲ ಎಂದು ಇಡಿ ತನಿಖೆ ಮಾಡಿ ತಿಳಿಸಿದೆ. ಈಗ ಅದನ್ನು ಮತ್ತೆ ಆರಂಭಿಸಿದ್ದು, ಈ ದ್ವೇಷ ರಾಜಕಾರಣ ಎಷ್ಟು ದಿನ ನಡೆಯುತ್ತದೆ. ಈ ದ್ವೇಷ ರಾಜಕಾರಣಕ್ಕೆ ಧಿಕ್ಕಾರ. ಮೋದಿ ಅವರಿಗೆ ಧಿಕ್ಕಾರ, ಕೇಂದ್ರ ಸರ್ಕಾರಕ್ಕೆ ಧಿಕ್ಕಾರ. ನಾವೆಲ್ಲರೂ ಕಲ್ಲು ಬಂಡೆಗಳಂತೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಜತೆ ನಿಲ್ಲುತ್ತೇವೆ ಎಂದು ಒಕ್ಕೋರಲಿನಿಂದ ಹೇಳೋಣ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್:
ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಷ್ಯಡ್ಯಂತ್ರ ರಚಿಸಿ ಇಡಿ ಮೂಲಕ ಕಿರುಕುಳ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ರಾಷ್ಟ್ರದಾದ್ಯಂತ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ನ್ಯಾಷನಲ್ ಹೆರಾಲಡ್ ಪ್ರಕರಣ 2015ರಲ್ಲಿ ಇದೇ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಿಸಿತ್ತು. ಆದರೆ ಈಗ ಅದೇ ಬಿಜೆಪಿ ಸರ್ಕಾರ ಚುನಾವಣೆಗೆ ಕೆಲವೇ ವರ್ಷ ಇರುವಾಗ ನಮ್ಮ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ನಮ್ಮ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಾರ್ಯಕರ್ತರು ಈ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಪಕ್ಷ ಕಾಂಗ್ರೆಸ್. ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದು ಕಾಂಗ್ರೆಸ್.
ಮೋದಿ ಅವರ ಈ ಬೆದರಿಕೆ ಪ್ರಯತ್ನ, ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನಕ್ಕೆ ಕುಗ್ಗುವುದಿಲ್ಲ. ನಾವು ಇಂದು ನಮ್ಮ ನಾಯಕರಿಗೆ ಧೈರ್ಯ ತುಂಬಲು ನಾವು ಈ ಹೋರಾಟ ಮಾಡುತ್ತಿದ್ದೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಈ ಷಡ್ಯಂತ್ರದ ವಿರುದ್ಧ ಹೋರಾಡೋಣ.
2023ರಲ್ಲಿ ರಾಜ್ಯದಲ್ಲಿ ಹಾಗೂ 2024ರಲ್ಲಿ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ. ಇಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲಿಗೆ ಆಗಮಿಸಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಇ ಅವರಿಗೆ ತಮ್ಮ ನಿಷ್ಠೆ ತೋರಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್:
ಬಿಜೆಪಿಯ ತಲೆಕೆಟ್ಟ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು 2010ರಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಖಾಸಗಿ ದೂರು ನೀಡಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ.
2017ರಲ್ಲಿ ಜಾರಿ ನಿರ್ದೇಶನಾಲಯ ಸಂಪೂರ್ಣ ವಿಚಾರಣೆ ಮಾಡಿ ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದರೂ 2019ರ ನಂತರ ನಮ್ಮ ನಾಯಕರಿಗೆ ಇಡಿ ವಿಚಾರಣೆ ಮೂಲಕ ಕಿರುಕುಳ ನೀಡಲಾಗುತ್ತಿದೆ.
ಕಾಂಗ್ರೆಸ್ ಪಕ್ಷ ಹೇಡಿಗಳ ಪಕ್ಷವಲ್ಲ. ಕಾಂಗ್ರೆಸ್ ನಿಮ್ಮ ಷಡ್ಯಂತ್ರಗಳಿಗೆ ಹೆದರುವ ಪಕ್ಷವಲ್ಲ. ಬ್ರಿಟೀಷರ ಗುಂಡಿಗೆ ಎದೆಕೊಟ್ಟ ಕಾಂಗ್ರೆಸ್ ಪಕ್ಷ ನಿಮ್ಮ ಇಡಿ, ಐಟಿ, ಸಿಬಿಐ ಬಲೆಗೆ ಭಯ ಬೀಳುವುದಿಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಮುಟ್ಟಿದರೆ ಅದರ ಪರಿಣಾಮ ಏನಾಗುತ್ತದೆ ಎಂದು ಎಚ್ಚರಿಕೆ ನೀಡಲು ಇಲ್ಲಿ ಕಾರ್ಯಕರ್ತರು ಸೇರಿದ್ದಾರೆ.
ಸನ್ಮಾನ್ಯ ಬೊಮ್ಮಾಯಿ ಹಾಗೂ ಮೋದಿ ಅವರೇ ಇದೇ ರೀತಿ 1977ನ ಇಸವಿಯಲ್ಲಿ ನಿಮ್ಮ ಪೂರ್ವಜರು ಇಂದಿರಾ ಗಾಂಧಿ ಅವರ ಬಂಧನವಾದಾಗ ಏನಾಗಿತ್ತು ಎಂದು ಯೋಚಿಸಿ. ರಾಷ್ಟ್ರದ ಏಕತೆಗಾಗಿ ಪ್ರಾಣ ತ್ಯಾಗ ಮಾಡಿದ ಕುಟುಂಬಕ್ಕೆ ನೀವು ತೊಂದರೆ ಕೊಟ್ಟರೆ ನಾವು ಸಹಿಸುವುದಿಲ್ಲ.
ಇನ್ನೆರಡು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮುಂದಿನ ವರ್ಷ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಬೆನ್ನಿಗೆ ನಿಂತಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್
ಇಂದು ಇಡೀ ದೇಶದಲ್ಲಿ ದೊಡ್ಡ ಆಂದೋಲನ ನಡೆಯುತ್ತಿದೆ. ಪ್ರಜಾಪ್ರಭುತ್ವ ಉಳಿಸಲು, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷದ ಧ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿದ್ದು, ಇದರ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಕಾಂಗ್ರೆಸ್ ಪಕ್ಷದವರನ್ನು ಬಂಧಿಸಿದರೆ, ಕೇಸ್ ಹಾಕಿದರೆ ಕಾಂಗ್ರೆಸ್ ಪಕ್ಷದ ಧ್ವನಿ ಅಡಗಿಸಬಹುದು ಎಂದು ನೀವು ಭಾವಿಸಿರಬಹುದು.
ದೇವರಾಜ ಅರಸು ಅವರು ವಿಧಾನಸಭೆಯಲ್ಲಿ ಒಂದು ಮಾತು ಹೇಳಿದ್ದರು. ನಾನು ದಂಡಿಗೆದರಲಿಲ್ಲ, ಮಿಣಿಮಿಣಿಗೆಜ್ಜೆಗೆದರುತ್ತೇನೋ ದಾಸಯ್ಯ ಎಂಬಂತೆ ಈ ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸಾವಿರಾರು ಪ್ರತಿಭಟನೆ ಮಾಡಿದೆ. ಇದಕ್ಕೆಲ್ಲ ಕಾಂಗ್ರೆಸ್ ಹೆದರುವುದಿಲ್ಲ. ನೀವು ಇಡಿ ನೊಟೀಸ್ ಯಾಕೆ ನೀಡುತ್ತೀರಿ? ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಹಣ ದುರುಪಯೋಗ ಮಾಡಿಕೊಂಡಿದ್ದಾರಾ?
2015ರಲ್ಲಿ ನಿಮ್ಮದೇ ಸರ್ಕಾರ ಈ ಪ್ರಕರಣದಲ್ಲಿ ಏನೂ ಇಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹಾಗೂ ಬೇರೆ ಟ್ರಸ್ಟಿಗಳ ಪಾತ್ರವಿಲ್ಲ ಎಂದು ಪ್ರಕರಣ ಅಂತ್ಯಗೊಳಿಸಿತ್ತು. ಆದರೂ ಈಗ ಯಾತಕ್ಕಾಗಿ ನೊಟೀಸ್ ನೀಡಿದ್ದೀರಿ ? ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಕರೆಸಿರುವುದೇಕ? ಮಲ್ಲಿಕಾರ್ಜುನ ಖರ್ಗೆ ಅವರನ್ನು 6 ತಾಸು ವಿಚಾರಣೆ ಮಾಡಿರುವುದೇಕೆ? ಖರ್ಗೆ ಅವರು ಟ್ರಸ್ಟಿ ಆಗಿ ಕೇವಲ 3 ತಿಂಗಳಾಗಿವೆ. ಅವರು ಯಾವ ಹಣ ತಿಂದಿದ್ದಾರೆ? ಅವರ ವಿಚಾರಣೆ ಮಾಡಜುವ ಅಗತ್ಯವೇನಿದೆ? ನೀವು ದೇಶದ ಜ್ವಲಂತ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಧಕ್ಕೆಯಾಗುತ್ತಿದೆ. ಪ್ರತಿಭಟನೆ ಮಾಡುವವರ ಮನೆ ಮೇಲೆ ಬುಲ್ಡೋಜರ್ ಹತ್ತಿಸುತ್ತಿದ್ದೀರಿ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದೀರಿ.
ಜನ ಎಲ್ಲವನ್ನು ನೋಡುತ್ತಿದ್ದಾರೆ. ನೀವು ಶಾಶ್ವತವಾಗಿ ಅಧಿಕಾರದಲ್ಲಿರುತ್ತೀರಿ ಎಂದು ಭಾವಿಸಿದ್ದರೆ ಅದು ನಿಮ್ಮ ಭ್ರಮೆ. ರಾಜ್ಯದಲ್ಲಿ ಇಂದು 40 ಪರ್ಸೆಂಟ್ ಲಂಚ ಹೊಡೆಯುತ್ತಿದ್ದೀರಿ. ಈ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆಯುತ್ತಾರೆ. ಒಂದು ಸಣ್ಣ ತನಿಖೆಯನ್ನು ಮಾಡಲಿಲ್ಲ. ಪ್ರತಿ ಇಲಾಖೆಯಲ್ಲಿ ಲಂಚ ನಡೆಯುತ್ತಿದ್ದರೂ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಎಸಿಬಿ, ಲೋಕಾಯುಕ್ತ ಸಂಸ್ಥೆಗಳು ಎಲ್ಲಿವೆ? ರಾಜ್ಯದ ಜನ ಮುಂದಿನ ವರ್ಷ ಚುನಾವಣೆ ಮಾಡಲಿದ್ದು, 2023ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ.
ನಮಗೆ ಹೋರಾಟ, ಪ್ರತಿಭಟನೆ ಗೊತ್ತಿದೆ. ಹೀಗಾಗಿ ಯಾವುದೇ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್:
ನಮ್ಮ ನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕರಾದ ರಾಹುಲ್ ಗಾಂಧಿ ಅವರಿಗೆ ಇಡಿ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದಾರೆ. ಇದೊಂದು ಬೇಜವಾಬ್ದಾರಿ ಸರ್ಕಾರ. ಇದಕ್ಕೆ ಬದ್ಧತೆ ಇಲ್ಲ. ಇವರು ಎಲ್ಲ ತನಿಖಾ ಸಂಸ್ಥೆಗಳನ್ನು ತಮ್ಮ ಅಸ್ತ್ರವಾಗಿ ಮಾಡಿಕೊಂಡಿದ್ದು, ತಮ್ಮ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಇವುಗಳನ್ನು ಬಳಸುತ್ತಾರೆ. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ. ನಮ್ಮ ಹೋರಾಟ ನಿರಂತರ.
ಇಂದು ರಾಹುಲ್ ಗಾಂಧಿ ಅವರು ಇಡಿ ಕಚೇರಿಗೆ ತೆರಳಿದ್ದು, ನಮ್ಮ ಸಂಸದರು ಹಾಗೂ ಎಐಸಿಸಿ ಪದಾಧಿಕಾರಿಗಳು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಲ್ಲಿ ರಾಜ್ಯ ನಾಯಕರು ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲರೂ ಈ ಭ್ರಷ್ಟ ಹಾಗೂ ಬಂಡ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಬೇಕಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ:
ಇಂದು ಬಿಜೆಪಿ ಸರ್ಕಾರ ನೀಚ ರಾಜಕಾರಣ ಮಾಡುತ್ತಿದೆ. ಕಳೆದ 8 ವರ್ಷದ ಅವಧಿಯಲ್ಲಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಿ ಪ್ರತಿಪಕ್ಷಗಳ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ.
ನಮ್ಮ ನೆಚ್ಚಿನ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಅವರಿಗೆ ನೋಟೀಸ್ ಜಾರಿ ಮಾಡಿ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ. ನಮ್ಮ ನಾಯಕರುಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ವಿರುದ್ದ ಹೋರಾಟ ಮಾಡಿದ್ದು, ನಾವು ಅಂದೂ ಕೂಡ ಕುಗ್ಗಿಲ್ಲ, ಇಂದೂ ಕೂಡ ಕುಗ್ಗುವುದಿಲ್ಲ.
ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ ಹಾಗೂ ಎರಡು ವರ್ಷದಲ್ಲಿ ದೇಶದಲ್ಲಿ ಚುನಾವಣೆ ಬರಲಿದೆ. ಜನ ಈಗಾಗಲೇ ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಜಾತಿ ಧರ್ಮಗಳ ನಡುವೆ ವೈಷಮ್ಯ ಹುಟ್ಟುಹಾಕಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಜನರನ್ನು ಜಾತಿಸ ಧರ್ಮದ ಆಧಾರದ ಮೇಲೆ ಒಡೆಯುತ್ತಿದ್ದು, ದೇಶ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ.
ನಿರುದ್ಯೋಗ, ರೈತರ ಸಮಸ್ಯೆ, ಬ್ರಹ್ಮಾಂಡ ಭ್ರಷ್ಟಾಚಾರ ಎಲ್ಲವೂ ಮುಗಿಲು ಮುಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಮಣ್ಣುಪಾಲಾಗುತ್ತಿದೆ. ಬಿಜೆಪಿ ಸರ್ಕಾರವನ್ನು ಬುಡಸಮೇತ ಕಿತ್ತುಹಾಕಬೇಕಾಗಿದೆ.
ಬಿಜೆಪಿ ಸರ್ಕಾರ ಸುಳ್ಳನ್ನು ನೂರು ಅಥವಾ ಸಾವಿರ ಸಲ ಹೇಳಿದ ಮಾತ್ರಕ್ಕೆ ಸತ್ಯವಾಗುವುದಿಲ್ಲ. ಸತ್ಯವನ್ನು ರಕ್ಷಿಸುವ ಕೆಲಸ ನಾವು ಮಾಡಬೇಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಾವು ಹೇಗೆ ಬ್ರಿಟೀಷರ ವಿರುದ್ಧ ಹೋರಾಡಿದ್ದೇವೋ ಅದೇ ರೀತಿ ಬಿಜೆಪಿ ಸರ್ಕಾರದ ವಿರುದ್ಧವೂ ಹೋರಾಟ ಮಾಡಬೇಕಿದೆ. ಕೋಮುವಾದದ ಶಕ್ತಿಗಳನ್ನು ಕಿತ್ತೊಗೆಯುವ ಸಂಕಲ್ಪ ಮಾಡೋಣ.
ನಾವೆಲ್ಲರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಪರವಾಗಿ ಇಡೀ ಪಕ್ಷ ನೀಲ್ಲಲಿದೆ. ಅವರಿಗಾಗಿ ನಾವು ಎಂತಹುದೇ ತ್ಯಾಗಕ್ಕೂ ಸಿದ್ಧವಿದ್ದೇವೆ. ನಮ್ಮ ಈ ಹೋರಾಟ ಬಿಜೆಪಿ ಸರ್ಕಾರ ಕಿತ್ತೊಗೆಯುವವರೆಗೂ ಮುಂದುವರಿಯಲಿದೆ.
ಮಾಜಿ ಸಚಿವ ಯೂ.ಟಿ ಖಾದರ್:
ಬಿಜೆಪಿ ಸರ್ಕಾರ ನಮ್ಮ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡಲು ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರ ವಿರುದ್ಧ ರಾಜ್ಯ ಕಾಂಗ್ರೆಸ್ ಹೋರಾಡಿಲಿದೆ. ಕಾಂಗ್ರೆಸ್ ಪಕ್ಷದ ಹೋರಾಟ ರಾಜ್ಯದ ಜನರಿಗೆ ಅರಿವು ಮೂಡಿಸುವ ಹೋರಾಟವಾಗಿದೆ.
ಇ.ಡಿ, ಸಿಬಿಐ ಹಾಗೂ ಐಟಿ ಸೇರಿದಂತೆ ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ. ಪಕ್ಷದ ಪ್ರತಿ ಕಾರ್ಯಕರ್ತರು ಪ್ರತಿ ಬೂತ್ ಮಟ್ಟದಲ್ಲಿ ಬಿಜೆಪಿಯ ಸರ್ವಾಧಿಕಾರಿ ಮುಖವಾಡವನ್ನು ಕಳಚಬೇಕು.
ಪ್ರಧಾನಿ ಮೋದಿ ಅವರು ಯಾವ ಅಧಿಕಾರಕ್ಕಾಗಿ ನೀವು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ತೊಂದರೆ ನೀಡುತ್ತಿದ್ದೀರಿ. ಆದರೆ ಸೋನಿಯಾ ಗಾಂಧಿ ಅವರು ಇದೇ ಪ್ರಧಾನಮಂತ್ರಿ ಹುದ್ದೆ ತಮ್ಮನ್ನು ಹುಡುಕಿಕೊಂಡು ಬಂದಾಗ ಸೋನಿಯಾ ಗಾಂಧಿ ಅವರು ನಿರಾಕರಿಸಿದ್ದರು.
ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಸರ್ವಾಧಿಕಾರಿ ಧೋರಣೆಯಂತೆ ಈ ಸರ್ಕಾರದ ಧೋರಣೆಯಾಗಿದೆ. ನೀವು ಸಮಾಜ ಒಡೆಯಲು ಬುಲ್ಡೋಜರ್ ಪ್ರಯೋಗಿಸಿದರೆ, ನಾವು ಸಮಾಜವನ್ನು ಒಟ್ಟಾಗಿ ಕಟ್ಟಲು ಬಳಸುತ್ತೇವೆ.