ಸಮುದಾಯ ಮಟ್ಟದಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ಪತ್ತೆ ಹಚ್ಚಲಾಗುತ್ತಿದೆ.
ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ದಿಂದ ಕಲಬುರಗಿ ಜಿಲ್ಲೆಯ ಒಟ್ಟು 10 ಸ್ಥಳಗಳಲ್ಲಿ National Sero Survelliance for COVID-19 ಸರ್ವೇಕ್ಷಣಾ ಕಾರ್ಯ ಆರಂಭಿಸಲಾಗಿದೆ.
ಸ್ಥಳೀಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ National Institute for Research in Tuberculosis 30 ಜನರನ್ನೊಳಗೊಂಡ ತಂಡವು ಈ ಸರ್ವೇಕ್ಷಣೆ ನಡೆಸಲಿದೆ.
ಸಮುದಾಯ ಮಟ್ಟದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯ ಸದ್ಯ ಪರಿಸ್ಥಿತಿಯನ್ನು ಪರಿಶೀಲಿಸುವುದೇ ಈ ಸರ್ವೇಕ್ಷಣಾದ ಉದ್ದೇಶವಾಗಿದೆ. ಈ ಸರ್ವೇಕ್ಷಣೆಗಾಗಿ ಕರ್ನಾಟಕದ ಕಲಬುರಗಿ, ಚಿತ್ರದುರ್ಗ ಹಾಗೂ ಬೆಂಗಳೂರು ನಗರ ಈ ಮೂರು ಜಿಲ್ಲೆಗಳನ್ನು ಅಯ್ದುಕೊಳ್ಳಲಾಗಿದೆ.