ಬೆಂಗಳೂರು: ಎಸ್ ಎಂ ಕೃಷ್ಣ ಬಿಜೆಪಿಗೆ ಬಂದ ಮೇಲೆ ಕಾಂಗ್ರೆಸ್ ನ ನಾಯಕರು ಅವರ ಮೇಲೆ ಟೀಕೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಮಾಡಿದ ವ್ಯಂಗ್ಯವೊಂದು ಅವರಿಗೇ ತಿರುಗುಬಾಣವಾಗಿದೆ.
ನಿನ್ನೆ ಖರ್ಗೆ ಕೃಷ್ಣರನ್ನು ಟೀಕಿಸುವ ಭರದಲ್ಲಿ “ಅಯ್ಯೋ ಪಾಪ… ತಮ್ಮ ಅನುಭವದಷ್ಟು ವಯಸ್ಸಾಗದ ಅಮಿತ್ ಶಾ ಎದುರು ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಎಸ್ ಎಂ ಕೃಷ್ಣ ಅವರದ್ದಾಗಬಾರದಿತ್ತು ಎಂದಿದ್ದರು.
ಬಹುಶಃ ಹಾಗೆ ಹೇಳುವಾಗ ತಮ್ಮ ಪರಿಸ್ಥಿತಿ ಬಗ್ಗೆ ಅವರು ಯೋಚಿಸಲಿಲ್ಲವೇನೋ. ಅದಕ್ಕೇ ಇಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ಹಾಗಿದ್ದರೆ ಖರ್ಗೆ ರಾಜಕೀಯಕ್ಕೆ ಬಂದಿದ್ದು ಯಾವಾಗ? ರಾಹುಲ್ ಗಾಂಧಿ ವಯಸ್ಸೆಷ್ಟು? ರಾಹುಲ್ ಮತ್ತು ಖರ್ಗೆ ನಡುವೆ ವಯಸ್ಸಿನ ಅಂತರವೆಷ್ಟು ಎಂದು ಟ್ವಿಟರ್ ನಲ್ಲಿ ಟಾಂಗ್ ಕೊಟ್ಟಿದ್ದಾರೆ.
ವಿಶೇಷವೆಂದರೆ ಕೃಷ್ಣ ಮತ್ತು ಅಮಿತ್ ಶಾ ಬಗ್ಗೆ ಟೀಕಿಸಿದ್ದ ಖರ್ಗೆ ರಾಜಕೀಯಕ್ಕೆ ಬಂದ ವರ್ಷ ರಾಹುಲ್ ಗಾಂಧಿ ಜನಿಸಿದ್ದರು. ಇದೇ ಹಿನ್ನಲೆಯಲ್ಲಿ ಸುರೇಶ್ ಕುಮಾರ್ ಈ ರೀತಿ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ