ಐಟಿ ದಾಳಿಗೆ ಮುನ್ನ ಕೇಂದ್ರ ಸಚಿವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನುವ ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಹುರುಳಿಲ್ಲ ಎಂದು ಬಿಜೆಪಿ ವಕ್ತಾರ, ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಷ್ಟೊಂದು ವಿವೇಚನೆ ಇಲ್ಲದಿರುವ ಕೇಂದ್ರ ಸಚಿವರು ಇಲ್ಲ. ಯಾರೊಬ್ಬ ಕೇಂದ್ರ ಸಚಿವರು ಡಿ.ಕೆ.ಶಿವಕುಮಾರ್‌ರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಭಾವಶಾಲಿ ಕೇಂದ್ರ ಸಚಿವರೊಬ್ಬರು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದರು ಎನ್ನುವ ಸ್ಫೋಟಕ ಮಾಹಿತಿಯನ್ನು ಮಾಧ್ಯಮಗಳು ಬಹಿರಂಗಪಡಿಸಿದ್ದವು.
ಕಳೆದ 20 ದಿನಗಳ ಹಿಂದೆ ಪ್ರಧಾನಿ ಮೋದಿಯವರ ಆತ್ಮಿಯರಾಗಿರುವ ಬಿಜೆಪಿಯ ಕೇಂದ್ರ ಸಚಿವರೊಬ್ಬರು ಡಿ.ಕೆ.ಶಿವಕುಮಾರ್‌ಗೆ ಕರೆ ಮಾಡಿ ನಿಮ್ಮಂತಹ ಡೈನಾಮಿಕ್ ನಾಯಕರು ಬಿಜೆಪಿ ಪಕ್ಷಕ್ಕೆ ಬೇಕಾಗಿದೆ. ಆದ್ದರಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಎಂದು ಆಹ್ವಾನ ನೀಡಿದ್ದರೂ ಎನ್ನಲಾಗಿದೆ.
ಬಿಜೆಪಿಯ ಥಿಂಕ್‌ಟ್ಯಾಂಕ್ ಎಂದು ಕರೆಯಲಾಗುವ ಕೇಂದ್ರ ಸಚಿವರೊಬ್ಬರು, ಡಿಕೆಶಿಯವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗುತ್ತಿದೆ. ನಿಮ್ಮ ನಾಯಕರೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನೀವು ಕೂಡಾ ಪಕ್ಷಕ್ಕೆ ಬನ್ನಿ ಎಂದು ಕೋರಿದ್ದರು ಎಂದು ವರದಿಯಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.