Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗವಿಗಂಧಾಧರನಿಗೆ ಸೂರ್ಯ ರಶ್ಮಿ ಸ್ಪರ್ಶ

ಗವಿಗಂಧಾಧರನಿಗೆ ಸೂರ್ಯ ರಶ್ಮಿ ಸ್ಪರ್ಶ
, ಶನಿವಾರ, 14 ಜನವರಿ 2017 (08:45 IST)
ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಇಂದು ಸೂರ್ಯ ರಶ್ಮಿ ಲಿಂಗವನ್ನು ಸ್ಪರ್ಶಿಸಿ ಹಾಗುಹೋಗುವ ಕೌತುಕ ನಡೆಯಲಿದ್ದು, ಇದನ್ನು ಕಣ್ತುಂಬಿಸಿಕೊಳ್ಳಲು ಭಕ್ತಗಣ ಕಾತುರದಿಂದ ಕಾಯುತ್ತಿದೆ.

ಮಕರ ಸಂಕ್ರಾಂತಿ ಹಬ್ಬದ ದಿನ ಸೂರ್ಯ ತನ್ನ ಪಥ ಬದಲಿಸುತ್ತಾನೆ.  ಪ್ರತಿವರ್ಷ ಈ ವಿಶೇಷ ದಿನದಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯ ರಶ್ಮಿ ಹಾದು ಹೋಗುತ್ತವೆ.
 
ಹೀಗಾಗಿ ಇಂದು ಮುಂಜಾನೆಯಿಂದಲೇ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ದೇವಸ್ಥಾನ ಗವಿಯಲ್ಲಿರುವುದರಿಂದ ಏಕಕಾಲಕ್ಕೆ ಕೇವಲ 20 ರಿಂದ 25 ಜನ ಮಾತ್ರ ದೇವರ ದರ್ಶನ ಪಡೆಯ ಬಹುದು. ಹೀಗಾಗಿ ಸೂರ್ಯ ರಶ್ಮಿ ಗಂಗಾಧರನನ್ನು ಸ್ಪರ್ಶಿಸುವ ದೃಶ್ಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ದೇವಸ್ಥಾನದ ದ ಹೊರಗೆ ಎಲ್‌‌ಸಿಡಿ ಮಾನಿಟರ್ ಅಳವಡಿಸಲಾಗಿದೆ.
 
ಇಂದು ಸಂಜೆ 5.40ಕ್ಕೆ ಸೂರ್ಯ ರಶ್ಮಿ ಲಿಂಗದವನ್ನು ಸ್ಪರ್ಶಿಸಿ ಹಾಗುಹೋಗಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಲೆ- ಆತ್ಮಹತ್ಯೆಯಲ್ಲಿ ಕೊನೆಯಾದ ಅನೈತಿಕ ಸಂಬಂಧ