ಎಲ್ಲದಕ್ಕೂ ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಸುಮ್ಮನೇ ವೇಗವಾಗಿ ಮಾತನಾಡುವುದರಲ್ಲಿ ಅರ್ಥವಿಲ್ಲ. ಸುಮಲತಾಗೆ ಹಿಂದೆ ಮುಂದೆ ಏನು ಗೊತ್ತಿದೆ? ಹೀಗಂತ ಸಚಿವರೊಬ್ಬರು ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿದ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಆ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದ್ರು.
ಹಿಂದೆ ಮುಂದೆ ಏನು ಗೊತ್ತಿದೆ? ಸಾಲ ಮನ್ನಾ ಸರಿಯಾಗಿ ಆಗಿಲ್ಲ ಎಂಬ ಸುಮಲತಾ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ್ರು. ಸಾಲ ಮನ್ನಾ ಬಗ್ಗೆ ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಸುಮ್ಮನೆ ವೇಗವಾಗಿ ಮಾತನಾಡೋದರಲ್ಲಿ ಅರ್ಥ ಇಲ್ಲ. ಜೂನ್ ಒಳಗೆ ಸಹಕಾರಿ ಬ್ಯಾಂಕುಗಳ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಸರ್ಕಾರ ನಡೆಸುತ್ತಿರುವರು ನಾವು. ಸಾಲ ಮನ್ನಾ ಬಗ್ಗೆ ನಮಗೆ ಗೊತ್ತಿಲ್ವಾ..? ಅವರಿಗೆ ಹಿಂದೆ ಮುಂದೆ ಏನು ಗೊತ್ತಿದೆ..? ಎಂದು ಸುಮಲತಾ ವಿರುದ್ಧ ಕಿಡಿಕಾರಿದ್ರು.
ಚುನಾವಣೆ ನೀತಿ ಸಂಹಿತೆ ಜಾರಿಗೂ ಮೊದಲು ಸಹಕಾರಿ ಬ್ಯಾಂಕುಗಳಿಗೆ 2600 ಕೋಟಿ ಬಿಡುಗಡೆ ಆಗಿದೆ. ಅದರಲ್ಲಿ 2000 ಕೋಟಿ ಈಗಾಗಲೇ ರೈತರ ಅಕೌಂಟ್ ಗೆ ಹೋಗಿದೆ. ವಾಣಿಜ್ಯ ಬ್ಯಾಂಕುಗಳ 2800 ಕೋಟಿ ರೈತರ ಅಕೌಂಟ್ ಗೆ ಹೋಗಿದೆ. ಇದೆಲ್ಲಾ ಏನು ಸುಮ್ಮನೇನಾ..? ಎಂದು ಮರು ಪ್ರಶ್ನೆ ಮಾಡಿದ್ರು.
ರೈತರ ಬಗ್ಗೆ ಯಾರು ಹಗುರವಾಗಿ ಮಾತನಾಡಬಾರದು. ಸರಿಯಾದ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತನಾಡಬೇಕು ಎಂದು ಸುಮಲತಾಗೆ ಪರೋಕ್ಷ ಎಚ್ಚರಿಕೆ ನೀಡಿದ್ರು.