ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲವನ್ನು ಕೆಡವಿ ಹಾಕಬೇಕೆಂ ಕೂಗು ಎದ್ದಿದೆ.
ದೇವಸ್ಥಾನ ಕೆಡವಿ ಹಾಕಬೇಕು. ದೇಗುಲ ಟ್ರಸ್ಟ್ ನಲ್ಲಿರುವ 60 ಲಕ್ಷ ರೂ. ಹಣವನ್ನು ಸಂತ್ರಸ್ತರ ಚಿಕಿತ್ಸೆಗೆ ಬಳಸಬೇಕು ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣ ಹಾಗೂ ಸಂತ್ರಸ್ತರಿಗೆ ಸರ್ಕಾರ ಸವಲತ್ತು, ಪರಿಹಾರ ಸಂಬಂಧ ನಡೆದ ಸುಳ್ವಾಡಿ ದುರಂತ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಂತ್ರಸ್ತರೆಲ್ಲರಿಗೂ ಪಡಿತರ ಚೀಟಿ ಹಂಚಿಕೆ ಮಾಡಿ ಸಂಚಾರಿ ನ್ಯಾಯಬೆಲೆ ಅಂಗಡಿ ತೆರೆಯಬೇಕು. ಪ್ರೌಢಶಾಲೆ ತೆರೆಯಬೇಕು. ಭೂಮಿ ಕೊಡಿಸುವ ಕೆಲಸ ಆಗಬೇಕಿದೆ. ವಿಷಪ್ರಸಾದ ಸೇವಿಸಿ ನರಗಳು ದೌರ್ಬಲ್ಯವಾಗಿದ್ದು, ಜೀವಂತವಾಗಿ ನರಳುತ್ತಿರುವವರಿಗೆ ತ್ವರಿತವಾಗಿ ಚಿಕಿತ್ಸೆ ಕೊಡಿಸುವ ಕೆಲಸ ಆಗಬೇಕು. ಸುಳ್ವಾಡಿಗೆ ತಾಲೂಕು ವೈದ್ಯಾಧಿಕಾರಿಯನ್ನು ನೇಮಿಸಬೇಕು ಎಂದು ಒತ್ತಾಯಿಸಲಾಯಿತು.