ರೊಚ್ಚಿಗೆದ್ದ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಯೊಳಗೆ ಪ್ರತಿಭಟನೆ ನಡೆಸಿದ್ದಾರೆ.
ಬೆವರು ಸುರಿಸಿ ಬೆಳೆದ ಕಬ್ಬಿನ ಫಸಲನ್ನು ಬೆಳೆದಿದ್ದರೂ ಕಟಾವು ಮಾಡಿಕೊಳ್ಳದೆ ಬೇಜವಾಬ್ದಾರಿತನ ತೋರುತ್ತಿರುವ
ಮಂಡ್ಯದ ಕೋರಮಂಡಲ ಕಾರ್ಖಾನೆಯಲ್ಲಿ ಬಂಡಿಹೊಳೆ ಗ್ರಾಮದ ನೂರಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸಿದ್ರು.
17 ತಿಂಗಳಾದರೂ ಕಬ್ಬು ಕಟಾವು ಮಾಡದೆ ಹಾಗೂ ಕಬ್ಬು ಕಟಾವ್ ಮಾಡುವ ಕಾರ್ಮಿಕರನ್ನು
ಹೆಚ್ಚು ನಮ್ಮ ಭಾಗದಲ್ಲಿ ನೇಮಿಸದೆ ರೈತರಿಗೆ ಮೋಸ ಮಾಡಲಾಗುತ್ತಿದೆ.
ರೈತ ಮಳೆ ಇಲ್ಲದೆ ಅರ್ಧ ಪಸಲು ಒಣಗಿದ್ದರೂ ಇನ್ನುಳಿದ ಬೆಳೆಯನ್ನ ಆದರೂ ಸೂಕ್ತ ಸಮಯಕ್ಕೆ ಕಾರ್ಖಾನೆಗಳು ಕಟಾವು ಮಾಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಕಾರ್ಖಾನೆಯವರ ಬೇಜವಾಬ್ದಾರಿಯಿಂದ ರೈತ ಕಂಗಾಲಾಗಿದ್ದು ಬಂಡಿಹೊಳೆ ಗ್ರಾಮದ ರೈತರು ತೀವ್ರ ಆಕ್ರೋಶ ಹೊರಹಾಕಿದ್ರು.