Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಡಿಗೆ ಕ್ಲೀನ್ ಚಿಟ್: ಸಿಎಂ ಸಿದ್ದು ಸರಕಾರಕ್ಕೆ ತೀವ್ರ ಮುಖಭಂಗ

ಆಡಿಗೆ ಕ್ಲೀನ್ ಚಿಟ್: ಸಿಎಂ ಸಿದ್ದು ಸರಕಾರಕ್ಕೆ ತೀವ್ರ ಮುಖಭಂಗ
ಬೆಂಗಳೂರು , ಗುರುವಾರ, 26 ಮೇ 2016 (19:37 IST)
ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಸುಭಾಷ್. ಬಿ. ಆಡಿಯವರಿಗೆ ಕ್ಲೀನ್ ಚಿಟ್ ದೊರೆತ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ.
 
ನ್ಯಾಯಮೂರ್ತಿ ಸುಭಾಷ್. ಬಿ. ಆಡಿ ಅವರು ತಮ್ಮ ವ್ಯಾಪ್ತಿಯನ್ನು ಮೀರಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಸರಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು. ಇವರ ಕುರಿತು ಇರುವ ಆರೋಪಗಳನ್ನು ತನಿಖೆ ನಡೆಸುವಂತೆ ಸಿಜೆ ಅವರಿಗೆ ವರ್ಗಾಯಿಸಲಾಗಿತ್ತು.
 
ಆರೋಪಗಳನ್ನು ತನಿಖೆ ನಡೆಸಿದ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ, ಸುಭಾಷ್. ಬಿ. ಆಡಿ ವಿರುದ್ಧದ ಆರೋಪಗಳಿಗೆ ಯಾವುದೇ ನಿಖರವಾದ ಆಧಾರಗಳಿಲ್ಲ. ಇವರು ಕೈಗೊಂಡ ನಿರ್ಣಯದ ಹಿಂದೆ ಯಾವುದೇ ದುರುದ್ದೇಶವಿಲ್ಲ ಹಾಗಾಗಿ ಸಾರ್ವಜನಿಕ ಹಿತಾದೃಷ್ಟಿಯಿಂದ ಕೆಲವು ನಿರ್ಣಯ ಕೈಗೊಂಡಿದ್ದಾರೆ ಎಂದು ಸ್ವೀಕರ್ ಅವರಿಗೆ ವರದಿ ಸಲ್ಲಿಸಿ ಕ್ಲೀನ್ ಚಿಟ್ ನೀಡಿದ್ದಾರೆ.

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ದೇಶದ ಒಂದು ಭಾಗದಲ್ಲಿ ಮಾತ್ರ ಜನಪ್ರಿಯತೆ ಹೊಂದಿದ್ದಾರೆ: ಸಿಎಂ