ರಸ್ತೆ ಕಾಮಗಾರಿ ವಿಳಂಬವಾಗ್ತಿದ್ದು, ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರಗಾನಕುಂಟೆಯಲ್ಲಿ ರಸ್ತೆ ಕಾಮಗಾರಿ ಆರಂಭಿಸಿ ಹಲವಾರು ತಿಂಗಳುಗಳೇ ಕಳೆದರೂ ಸಹ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದ್ರಿಂದಾಗಿ ಈ ಮಾರ್ಗವಾಗ ಬಸ್ ಸಂಚಾರ ಬಂದ್ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳ್ಳದೆ ಈ ರಸ್ತೆಯ ಮಾರ್ಗದಲ್ಲಿ ಯಾವುದೇ ಬಸ್ ಸಂಚಾರ ಆರಂಭಿಸುವುದಿಲ್ಲ. ವಿದ್ಯಾರ್ಥಿಗಳು ಶಾಲೆಗೆ ತೆರಳಲು 8ರಿಂದ 10ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಕ್ರಮಿಸಿ ತೆರಳಬೇಕಾಗಿದೆ. ಅಧಿಕಾರಿಗಳು ಮತ್ತು ಸಂಬಂಧಪಟ್ಟವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರೂ ಸಹ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಕೊಲಿಂಪಲ್ಲಿ, ಚಿನ್ನೆಪಲ್ಲಿ, ಕೃಷ್ಣಾಪುರ, ಕೊತ್ತಕೋಟೆ, ಪೆಸಲಪರ್ತಿ, ಮಾಮಿಡಿಕಾಯಲಪಲ್ಲಿ, ಮುಮ್ಮಡಿವಾರಪಲ್ಲಿ, ಜಿಲ್ಲಾಲಪಲ್ಲಿ, ಮಾಡಪಲ್ಲಿ, ಕೊತ್ತಪಲ್ಲಿ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಯಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಕಾಮಗಾರಿ ನಡೆಸುತ್ತಿರುವ ಲೋಕೋಪಯೋಗಿ ಇಲಾಖೆಯಾಗಲಿ, ಸಾರಿಗೆ ಇಲಾಖೆಯಾಗಲಿ ಕೊಂಚವೂ ಕಣಿಕರವಿಲ್ಲವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ರು. ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಪೋಷಕರು ಆಗ್ರಹಿಸಿದ್ದಾರೆ.