Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರೀತಿಸು ಎಂದು ಪೀಡಿಸಿದ್ದಕ್ಕೆ ಆತ್ಮಹತ್ಯೆ!

ಪ್ರೀತಿಸು ಎಂದು ಪೀಡಿಸಿದ್ದಕ್ಕೆ ಆತ್ಮಹತ್ಯೆ!
ಮೈಸೂರು , ಬುಧವಾರ, 14 ಸೆಪ್ಟಂಬರ್ 2016 (11:22 IST)
ಯುವಕನೊಬ್ಬನ್ನು ತನ್ನನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ಅಪ್ರಾಪ್ತ ಬಾಲಕಿ  ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಎಚ್‌ಡಿ ಕೋಟೆಯಲ್ಲಿ ನಡೆದಿದೆ.
ಕಿರಣ ಎನ್ನುವ ಯುವಕ ಕಳೆದ ಮೂರು ತಿಂಗಳಿಂದ ಸೌಂದರ್ಯ (17) ಎಂಬ ಯುವತಿಯನ್ನು ಪ್ರೀತಿಸು ಎಂದು ಪೀಡಿಸುತ್ತಿದೆ. ಒಂದು ವೇಳೆ ಪ್ರೀತಿಸಲು ನಿರಾಕರಿಸಿದರೆ ಆಸಿಡ್ ಎರಚಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದರಿಂದ ಮನನೊಂದು ಯುವತಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
 
ತೀವ್ರವಾಗಿ ಗಾಯಗೊಂಡಿದ್ದ ಅಪ್ರಾಪ್ತ ಯುವತಿ ಸೌಂದರ್ಯಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕೆತ್ಸೆ ಫಲಕಾರಿಯಾಗದೆ ಯುವತಿ ಕೊನೆಯುಸಿರೆಳೆದಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನವಜಾತ ಶಿಶುವನ್ನು ಹೂಳ ಹೊರಟ ತಾಯಿ-ಮಾವ