ಬೆಂಗಳೂರು : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆಎಂಎಫ್ ಹಾಲು ಪೂರೈಕೆದಾರರು ಮುಷ್ಕರ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಕಳೆದ 2 ದಿನಗಳಿಂದ ನಂದಿನಿ ಹಾಲು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ಇದರಿಂದಾಗಿ ನಂದಿನಿ ಬೂತ್ಗಳಲ್ಲಿ ಹಾಲು, ಮೊಸರು ಸಿಗದೇ ಜನರು ವಾಪಸ್ ಹೋಗುತ್ತಿದ್ದಾರೆ. ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗದಿ ಮಾಡುವಂತೆ ಒತ್ತಾಯಿಸಿ ನಂದಿನಿ ಹಾಲು ಪೂರೈಕೆ ಮಾಡುವ ಲಾರಿ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹಲವು ಬೇಡಿಕೆಗೆ ಒತ್ತಾಯಿಸಿ ಕಳೆದ 2 ದಿನಗಳಿಂದ ಲಾರಿ ಮಾಲೀಕರು ಬಮೂಲ್ ಹಾಲು ವಿತರಣೆ ನಿಲ್ಲಿಸಿದ್ದು, ಇದರಿಂದ ನಗರದ ಹಲವೆಡೆ ನಂದಿನಿ ಹಾಲು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.