ವಿಜಯಪುರ ಜಿಲ್ಲೆಯ ಹೊಸಪೇಟೆಯಲ್ಲಿ ನವಜಾತ ಶಿಶು ಸಾವು ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವಾಗಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಲು ಹಣ ಕೇಳ್ತಾರೆ ಎಂಬ ಆರೋಪವಿದೆ. ಅದು ಸಾಬೀತಾದ್ರೆ ಅದಕ್ಕೂ ಕ್ರಮ ಕೈಗೊಳ್ತೇವೆ ಎಂದು ತಿಳಿಸಿದ್ರು. MCH ಆಸ್ಪತ್ರೆ ವೈದ್ಯರು ಸ್ಕ್ಯಾನಿಂಗ್ಗೆ ತಮಗೆ ಬೇಕಾದ ಕ್ಲಿನಿಕ್ಗಳಿಗೆ ಬರೆದುಕೊಡುತ್ತಾರೆ ಅನ್ನೋ ಆರೋಪ ಇದೆ. ಅದರ ಬಗ್ಗೆಯೂ ತನಿಖೆ ಮಾಡಲು ತಂಡ ರಚನೆ ಮಾಡಲಾಗಿದೆ. ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ. ಸಾವಿಗೆ ಇಂತವರೇ ಹೊಣೆ ಎಂದು ಸದ್ಯಕ್ಕೆ ಹೇಳಲು ಆಗಲ್ಲ, ತನಿಖೆಯಾಗುತ್ತಿದೆ. ಹಾಗೆ ವೈದ್ಯರು & ಸಾವನ್ನಪ್ಪಿದ ಮಗುವಿನ ಸಂಬಂಧಿಕರಿಂದಲೂ ಮಾಹಿತಿ ಪಡೆದಿದ್ದೇನೆ ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದ್ರು.