Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೆಲ, ಜಲ, ಭಾಷೆ ರಕ್ಷಣೆಗೆ ರಾಜ್ಯ ಸರಕಾರ ಬದ್ಧ: ವಿ.ಆರ್.ವಾಲಾ

ನೆಲ, ಜಲ, ಭಾಷೆ ರಕ್ಷಣೆಗೆ ರಾಜ್ಯ ಸರಕಾರ ಬದ್ಧ: ವಿ.ಆರ್.ವಾಲಾ
ಬೆಂಗಳೂರು , ಸೋಮವಾರ, 6 ಫೆಬ್ರವರಿ 2017 (11:25 IST)
ರಾಜ್ಯದ ನೆಲ, ಜಲ, ಭಾಷೆ ರಕ್ಷಣೆಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ರಾಜ್ಯಪಾಲ ವಜೂಭಾಯ್ ವಾಲಾ ಹೇಳಿದ್ದಾರೆ.
ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 4 ವರ್ಷಗಳಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಯೋಜನೆ ರೂಪಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವಲ್ಲಿ ರಾಜ್ಯ ಸರಕಾರ ಸಫಲವಾಗಿದೆ ಎಂದು ತಿಳಿಸಿದರು. 
 
ರಾಜ್ಯದ ಅಭಿವೃದ್ಧಿ ಸಾಕಾರಕ್ಕೆ ಸಮರ್ಥ ಕ್ರಮಕೈಗೊಳ್ಳಲಾಗಿದ್ದು, ರಾಜ್ಯ ಸರಕಾರ ಬಡವರು ಹಾಗೂ ದುರ್ಬಲ ವರ್ಗದವರ ಪರವಾಗಿದೆ. ಮಹದಾಯಿ, ಕಾವೇರಿ ನದಿ ನೀರು ಹಂಚಿಕೆ ವಿವಾದದ ಸವಾಲು ಎದುರಿಸುತ್ತಿರು ರಾಜ್ಯ ಸರಕಾರ, ನ್ಯಾಯಬದ್ಧ ಪಾಲು ಪಡೆದುಕೊಳ್ಳಲು ಬದ್ಧವಾಗಿದೆ ಎಂದು ರಾಜ್ಯಪಾಲ ವಜೂಭಾಯ್ ವಾಲಾ ಸ್ಪಷ್ಟಪಡಿಸಿದರು. 
 
ಇಂದಿನಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲಿ ಐಟಿ ದಾಳಿ ಹಾಗೂ ಬರ ನಿರ್ವಹಣೆಯ ಕುರಿತು ಚರ್ಚೆ ಕಾವೇರುವ ಸಾಧ್ಯತ್ಯೆಗಳಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋಳಿಯೊಂದು ಪಿಯಾನೋ ನುಡಿಸಿತ್ತಾ, ನೋಡವ್ವಾ ತಂಗಿ! (ವಿಡಿಯೋ)